Top Newsರಾಜಕೀಯರಾಜ್ಯಸುದ್ದಿ

ಬಾನು ಮುಷ್ತಾಕ್ ಕನ್ನಡದ ಹೆಣ್ಣು ಮಗಳು; ನಮ್ಮ ಸರ್ಕಾರ ಅವರಿಗೆ ಗೌರವ ನೀಡಿದೆ- ಪ್ರದೀಪ್ ಈಶ್ವರ್

ಬೆಂಗಳೂರು: ಬಾನು ಮುಷ್ತಾಕ್​ ಅವರು ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಬಿಜೆಪಿ ವಿರೋಧ ಮಾಡಿರುವ ವಿಚಾರಕ್ಕೆ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​​ ಪ್ರತಿಕ್ರಿಯಿ ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ‌ಮಾಡಿಸಿ ನಮ್ಮ ಸರ್ಕಾರ ಜಾತ್ಯಾತೀತ ಸರ್ಕಾರ ಅಂತ ತೋರಿಸಿದೆ. ದಸರಾ ನಮ್ಮ ನಾಡಹಬ್ಬ. ಬಾನು ಮುಷ್ತಾಕ್ ನಮ್ಮ ಕನ್ನಡದ ಹೆಣ್ಣು ಮಗಳು. ನಮ್ಮ ಸರ್ಕಾರ ಅವರಿಗೆ ಗೌರವ ನೀಡಿದೆ. ಇದು ನಿಜವಾಗಿಯೂ ಜಾತ್ಯಾತೀತಕ್ಕೆ ಕೊಡ್ತೀರೋ ಗೌರ‌ವ ಎಂದರು.

ಹಿಂದೆ ರಾಜರು ಮಿರ್ಜಾ ಇಸ್ಮಾಯಿಲ್ ಅವರನ್ನ ಕೂರಿಸಿಕೊಂಡು ದಸರಾ ಮಾಡಿದ್ದಾರೆ. ಬಾನು ಮುಷ್ತಾಕ್ ಉದ್ಘಾಟನೆ ಮಾಡಬಾರದು ಅಂತ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಹೋಗಿದ್ರು, ಬಿಜೆಪಿಯವರಿಗೆ ಮುಖಭಂಗ ಆಯ್ತು. ಸಂವಿಧಾನದ ಪ್ರಕಾರವೇ ನಾವು ಮಾಡಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

Comments (0)

Your email address will not be published. Required fields are marked *

Back to top button