Top Newsರಾಜ್ಯಸಿನಿಮಾಸುದ್ದಿ

ದರ್ಶನ್​ ಗೆ ಹೈಕೋರ್ಟ್ ಆದೇಶದ ಬಳಿಕವೂ ಸಿಗದ ಸವಲತ್ತು.. ಮತ್ತೆ ಕೋರ್ಟ್ ಮೊರೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ ನಲ್ಲಿ ಜೈಲು ಸೇರಿರುವ ನಟ ದರ್ಶನ್​​​ ಅವರಿಗೆ ಜೈಲಿನಲ್ಲಿ ಹೆಚ್ಚುವರಿ ದಿಂಬು, ಹಾಸಿಗ ಹಾಗೂ ಬೆಡ್​​​ ಶೀಟ್​​ ನೀಡುವಂತೆ ಬೆಂಗಳೂರಿನ ಕೆಳ ಹಂತದ ಕೋರ್ಟ್​​ ಆದೇಶ ಕೊಟ್ಟಿತ್ತು. ಕೋರ್ಟ್​​ ಕೂಡ ಇದಕ್ಕೆ ಸಮ್ಮತಿ ನೀಡಿತ್ತು. ಆದರೆ ಕೋರ್ಟ್​​ ಆದೇಶದ ಹೊರತಾಗಿಯೂ ದರ್ಶನ್​ ಅವರಿಗೆ ಸೌಲಭ್ಯ ನೀಡುತ್ತಿಲ್ಲ ಎನ್ನಲಾಗಿದೆ..

ಇನ್ನು ದರ್ಶನ್ ಪರ ವಕೀಲರು ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಕೆಳ ಹಂತದ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ದರ್ಶನ್ ಪರ ವಕೀಲ ಎಸ್.ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ದಿಂಬು, ಹಾಸಿಗೆ ಹಾಗೂ ಬೆಡ್‌ಶೀಟನ್ನು ನೀಡಬೇಕು. ಕೈಪಿಡಿಯಲ್ಲಿರುವಂತೆಯೇ ನಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿತ್ತು. ಆದರೆ ಕೋರ್ಟ್ ಆದೇಶದ ಬಳಿಕವೂ ದರ್ಶನ್ ಪರಿಸ್ಥಿತಿ ಹಿಂದಿನಂತೆಯೇ ಇದೆ ಎನ್ನಲಾಗಿದೆ.

ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ಕಾರಿಡಾರ್‌ನಲ್ಲಿ ವಾಕ್ ಮಾಡಲು ಮಾತ್ರ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಅದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ನೀಡಿಲ್ಲ. ಹಾಸಿಗೆ, ದಿಂಬು, ಬೆಡ್‌ಶೀಟ್ ಕೇಳಿದರೂ ನೀಡಿಲ್ಲ. ಹಿಂದಿನ ಸ್ಥಿತಿಯೇ ಮುಂದುವರಿದಿದೆ. ಕೋರ್ಟ್ ಆದೇಶ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ದರ್ಶನ್ ವಕೀಲರು ಕೋರ್ಟ್‌ನಲ್ಲಿ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button