ದೇಶ/ವಿದೇಶ

ರಾತ್ರಿ 8ಕ್ಕೆ ಪ್ರಧಾನಿ ಮೋದಿ ತುರ್ತು ಭಾಷಣ..!

ಪಹಲ್ಗಾಂ ದಾಳಿ ಹಾಗೂ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಮೊದಲ ಭಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ತುರ್ತು ಭಾಷಣ ಮಾಡಲಿದ್ದಾರೆ.

ಈ ಹಿಂದೆ ನೋಟ್ ಬ್ಯಾನ್ ಘೋಷಣೆ ವೇಳೆಯೂ ಪ್ರಧಾನಿ ಮೋದಿ ರಾತ್ರಿ 8 ಗಂಟೆಗೆ ಘೋಷಣೆ ಮಾಡಿದ್ದರು. ಇದಾದ ಬಳಿಕ ಕೊರೊನಾ ಲಾಕ್​​ಡೌನ್ ಘೋಷಣೆ ಅವಧಿಯಲ್ಲೂ ರಾತ್ರಿ 8 ಗಂಟೆಗೆ ದಿಢೀರ್ ಭಾಷಣ ಮಾಡಿ ದೇಶಾದ್ಯಂತ ಲಾಕ್​ ಡೌನ್ ಘೋಷಣೆ ಮಾಡಿದ್ದರು.

ಇದೀಗ ಭಾರತ-ಪಾಕ್ ನಡುವೆ ಯುದ್ಧ ನಡೆದು ಕದನ ವಿರಾಮ ಘೋಷಣೆ ಬಳಿಕ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ 3 ದಿನಗಳ ಭೀಕರ ಯುದ್ಧ ನಡೆದು ಟ್ರಂಪ್ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಣೆ ಆಗಿತ್ತು. ಇಷ್ಟಾದರೂ ಪಾಕಿಸ್ತಾನ ಮಾತ್ರ ಕದನ ವಿರಾಮ ಉಲ್ಲಂಘಿಸಿ ರಾಕೆಟ್ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಭಾಷಣ ಮಾಡ್ತಿದ್ದಾರೆ. ಇದು ಕದನ ವಿರಾಮವೋ ಅಥವಾ ಯುದ್ಧ ಮುಂದುವರಿಕೆಯೋ ಎಂಬ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ..

Comments (0)

Your email address will not be published. Required fields are marked *

Back to top button