ಪಾಕಿಸ್ತಾನದ ಉಗ್ರಗಾಮಿಗಳ ನೆಲೆ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರನ್ನ ಸರ್ವನಾಶ ಮಾಡಿ ಬಂದಿದೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಇಟ್ಟ ಹೆಸರು ‘ಆಪರೇಷನ್ ಸಿಂಧೂರ’.. ಇದೇ ಹೆಸರು ಈಗ ಹೊಸದೊಂದು ರೆಕಾರ್ಡ್ ಮಾಡುತ್ತಿದೆ.
ಈ ಹಿಂದೆ ಕಾಶ್ಮೀರದ ಉರಿ ಮೇಲೆ ದಾಳಿ ನಡೆದಿದ್ದಕ್ಕೆ ಪ್ರತೀಕಾರವಾಗಿ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು.. ಇದನ್ನೇ ಸಿನಿಮಾ ಆಗಿ ಮಾಡಲಾಯ್ತು. ‘URI’ ಹೆಸರಿನ ಸಿನಿಮಾ ಭರ್ಜರಿ ಹಿಟ್ ಆಯ್ತು.
ಈಗ ಆಪರೇಷನ್ ಸಿಂಧೂರದ ಹಿಂದೆ ದುಡ್ಡಿದ್ದವರು ಬಿದ್ದಿದ್ದಾರೆ. ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಕೊಟ್ಟಿದ್ದ ಆಪರೇಷನ್ ಸಿಂಧೂರ ಹೆಸರನ್ನು ತಮಗೆ ಕೊಡಿ ಅಂತ ಹಲವರು ಕೇಂದ್ರ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸ್ತಿದ್ದಾರೆ.. ವಾಣಿಜ್ಯ ಬಳಕೆಗಾಗಿ ಆಪರೇಷನ್ ಸಿಂಧೂರ ಹೆಸರಿನ ಹಕ್ಕು ನಮಗೆ ಕೊಡಿ ಅಂತ ಮನವಿ ಮಾಡಿದ್ದಾರೆ.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅರ್ಜಿ
ಆಪರೇಷನ್ ಸಿಂಧೂರ ಹೆಸರಿನ ಪೇಟೆಂಟ್ ಖರೀದಿಗೆ ಮೊದಲಿಗರಾಗಿ ಬಂದಿರೋದು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ. ಇವರ ಜೊತೆಗೆ ಮುಂಬೈ ಮೂಲದ ನಿವಾಸಿ ಮುಖೇಶ್ ಚೇತ್ರಂ ಅಗರ್ ವಾಲ್, ನಿವೃತ್ತ ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬರ್ಹ್, ದೆಹಲಿ ಮೂಲದ ವಕೀಲ ಅಲೋಕ್ ಕೊಥಾರಿ ಕೂಡ ಅರ್ಜಿ ಸಲ್ಲಿಸಿದ್ದಾರೆ.
ಆಪರೇಷನ್ ಸಿಂಧೂರ ಹೆಸರು ಪ್ರಕಟ ಆಗ್ತಿದ್ದಂತೆಯೇ ಹಲವರು ಈ ಹೆಸರು ನಮಗೆ ಕೊಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಶೈಕ್ಷಣಿಕ ಮತ್ತು ತರಬೇತಿ ಉದ್ದೇಶ, ಸಿನಿಮಾ ಮತ್ತು ಮಾಧ್ಯಮ ನಿರ್ಮಾಣ, ಲೈವ್ ಕಾರ್ಯಕ್ರಮಗಳ ಪ್ರಸಾರ, ಡಿಜಿಟಲ್ ಕಂಟೆಂಟ್ ಗಳ ನಿರ್ಮಾಣ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಈ ಹೆಸರನ್ನು ಬಳಸಲು ಅನುಮತಿ ಕೋರಿದ್ದಾರೆ. ಹೆಚ್ಚಿನ ಜನ ಅರ್ಜಿ ಸಲ್ಲಿಸುತ್ತಿರುವುದರಿಂದ ಕೇಂದ್ರ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯ ಹರಾಜು ಕೂಗುವ ಸಾಧ್ಯತೆಯೂ ಇದೆ. ಇಲ್ಲವೆ ಈ ಆಪರೇಷನ್ ಸಿಂಧೂರ ಹೆಸರನ್ನು ಯಾರಿಗೂ ಕೊಡದಿರುವ ಸಾಧ್ಯತೆ ಇದೆ.
ಒಂದು ವೇಳೆ ಹರಾಜು ಕೂಗಿದ್ದೇ ಆದಲ್ಲಿ, ದೇಶದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿಯೇ ಆಪರೇಷನ್ ಸಿಂಧೂರ ಹೆಸರಿನ ಪೇಟೆಂಟ್ ಪಡೆಯುವ ಸಾಧ್ಯತೆ ಇದೆ.