ರಾಜಕೀಯ

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ? ಸತೀಶ್ ಜಾರಕಿಹೊಳಿ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯ ಹಲವು ವಿಷಯಗಳು ಭಾರಿ ಚರ್ಚೆಯಾಗುತ್ತಿವೆ. ಒಂದೇಡೆ ಸತೀಶ್ ಜಾರಕಿಹೊಳಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ರೆ, ಇತ್ತ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ವಿಚಾರ ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷಕ್ಕೆ ಮುನ್ನುಡಿ ಬರೆಯುತ್ತಾ ಅನ್ನೋ ಕುತೂಹಲ ಮೂಡಿಸಿದೆ.

ಹೌದು.. ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಈಗಾಗಲೇ ಕರ್ನಾಟಕ ಡೆವಲಪ್​ಮೆಂಟ್​ ಫ್ರಂಟ್ (KDF) ಎಂದು ಹೊಸ ಸರ್ಕಾರದ ಹೆಸರನ್ನು ನಿರ್ಧರಿಸಲಾಗಿದೆ. ಕೆಡಿಎಫ್​ನಿಂದ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗ್ತಾರೆ ಅಂತ ಹೇಳಲಾಗ್ತಿದೆ. ಸತೀಶ್ ಜಾರಕಿಹೊಳಿಗೆ ಬಹುಮತ ಶಾಸಕರ ಬೆಂಬಲ ಇದೆ. ಇನ್ನು ಕಾಂಗ್ರೆಸ್​​ನ 70, ಬಿಜೆಪಿಯ 30, ಜೆಡಿಎಸ್​ನಿಂದ 16ಕ್ಕೂ ಹೆಚ್ಚು ಶಾಸಕರು ಸೇರಿದಂತೆ ಒಟ್ಟು 116ಕ್ಕೂ ಅಧಿಕ ಶಾಸಕರ ಬೆಂಬಲದಿಂದ ಸತೀಶ್ ಜಾರಕಿಹೊಳಿ ಸರ್ಕಾರ ರಚನೆ ಮಾಡಲಿದ್ದಾರೆ.

ಇನ್ನು ಸತೀಶ್ ಜಾರಕಿಹೊಳಿ ಸಿಎಂ ಆದ್ರೆ ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಅನ್ನೋದು ನೋಡುವುದಾದ್ರೆ, ಬಿಜೆಪಿಯಿಂದ ಉಚ್ಚಾಟಿತ ಶಾಸಕ ಯತ್ನಾಳ್​ ಅವರಿಗೆ ಹೋಂ ಮಿನಿಸ್ಟರ್​ ಖಾತೆ ಸಿಗಲಿದ್ದು, ಮೂರು ಪಾರ್ಟಿಯ ಘಟಾನುಘಟಿ ಶಾಸಕರಿಗೆ ಸರ್ಕಾರದಲ್ಲಿ ಚಾನ್ಸ್​ ಸಿಗಲಿದೆ. ಸತೀಶ್​ ಜಾರಕಿಹೊಳಿ ಸರ್ಕಾರಕ್ಕೆ ಅವರ ಸಹೋದರರ ಬೆಂಬಲ ಸೇರಿದಂತೆ, ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದ ಶಾಸಕರುಗಳಿಂದ ಸಹ ಬೆಂಬಲ ದೊರೆತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಕರ್ನಾಟಕ ಡೆವಲಪ್​ಮೆಂಟ್​ ಫ್ರಂಟ್​ (KDF)  ಅಧಿಕಾರಕ್ಕೆ ಬಂದ್ರೆ, ಈಗಿನ ಸಿಎಂ ಸಿದ್ದರಾಮಯ್ಯನವರೇ ಅಕ್ರೋಬರ್ ಬಳಿಕ ವಿಪಕ್ಷ ನಾಯಕನಾಗಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಹಾಲಿ ಟೀಂ ಸದಸ್ಯರೇ ಕೆಡಿಎಫ್ ಪಕ್ಷದಲ್ಲಿರ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಅವರ ಆಪ್ತರ ವಿರುದ್ಧವೇ ಹೋರಟ ಮಾಡುವ ಪರಿಸ್ಥಿತಿ ಬಂದೊದಗುತ್ತೆ.

ಕಾಂಗ್ರೆಸ್​ ಬಿಜೆಪಿಯಿಂದ ಕೆಡಿಎಫ್​ ಸರ್ಕಾರಕ್ಕೆ ಶಾಸಕರು ಯಾಕೆ ಬೆಂಬಲ ಕೊಡ್ತಾರೆ ಅನ್ನೋದು ನೋಡೊದಾದ್ರೆ, ಈಗಾಗಲೇ ಬಿಜೆಪಿ ಪಕ್ಷದಲ್ಲಿ ಬಂಡಾಯದ ಬೇಗುದಿ ಶುರುವಾಗಿದೆ. ಬಿಜಡಪಿ ಪಕ್ಷದಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಕಂಡ್ರೆ ಹಲವು ಶಾಸಕರಿಗೆ ಆಗ್ತಿಲ್ಲ. ಇನ್ನು ವಿಪಕ್ಷ ನಾಯಕ ಆರ್. ಅಶೋಕ್​ ಅವರನ್ನು ತಮ್ಮದೇ ಪಕ್ಷದ ನಾಯಕರು ಒಪ್ತಿಲ್ಲ. ಬಿಜೆಪಿಯಿಂದ ಯತ್ನಾಳ್​ರನ್ನು ಉಚ್ಚಾಟಿಸಿದ್ದಿಕ್ಕೆ ಪಂಚಮಸಾಲಿ ಶಾಸಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಹೀಗಾಗಿ ಬಿಜೆಪಿಯ ಎಲ್ಲಾ ಅತೃಪ್ತ ಶಾಸಕರು ಕೆಡಿಎಫ್​ಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ನಾಯಯ ಕಮ್ಯುನಿಟಿಯ  ಎಲ್ಲ ಶಾಸಕರೂ ಸಹ ಈಗಾಗಲೇ ಪಕ್ಷದ ಹಲವು ಬೆಳವಣಿಗೆಗಳನ್ನ ಅರಿತು ಮುನಿಸಿಕೊಂಡಿದ್ದಾರೆ.

ಇತ್ತ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಅನುದಾನ ಸಿಗ್ತಿಲ್ಲ, ಕ್ಷೇತ್ರ ಅಭಿವೃದ್ಧಿ ಆಗ್ತಿಲ್ಲ, ಅನ್ಯಾಯವಾಗ್ತಿದೆ ಅಂತ ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಡಿಕೆಶಿಗೆ ಸಿಎಂ ಗಾದಿ ಬಿಟ್ಟುಕೊಡಲು ಹಲವು ಶಾಸಕರು ಆಕ್ಷೇಪ. ಇದೆಲ್ಲದರಿಂದ ಬಂಡೆದ್ದ ಕಾಂಗ್ರೆಸ್​ ನಾಯಕರಿಂದ ಕೆಡಿಎಫ್​ ಸರ್ಕಾರ ರಚಿಸಲು ಮುಂದಾಗಿದ್ದಾರೆ.

ಇನ್ನು ಕರ್ನಾಟಕ ಡೆವಲಪ್​ಮೆಂಟ್ ಫ್ರಂಟ್​ ಸರ್ಕಾರ ರಚಿಸಲು ಬಿಜೆಪಿಯ ಹಲವು ನಾಯಕರ ಬೆಂಬಲವಿದೆ. ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ರ ಹಿಂದೆಯೂ ಹಲವು ಲೆಕ್ಕಾಚಾರ ಇದೆ ಎಂದು ಹೇಳಲಾಗ್ತಿದೆ. ಯತ್ನಾಳ್ ಅವರ ಶಕ್ತಿ ಅರಿವಾಗಬೇಕೆ ಅಂದ್ರೆ ಉಚ್ಚಾಟನೆ ಮಾಡಲೇಬೇಕು. ಆಗ ಯತ್ನಾಳ್ ಪಕ್ಷ ಸ್ಥಾಪಿಸಲು ಕಸರತ್ತು ಮಾಡ್ತಾರೆ. ಯತ್ನಾಳ್, ರಮೇಶ್, ಸತೀಶ್ ಒಟ್ಟಾಗಿ ಸೇರಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಬೀಳಿಸ್ತಾರೆ. ಅನ್ನೋ ಮಾತುಗಳು ಸಹ ಕೇಳಿ ಬರ್ತಿವೆ, ಅಲ್ಲದೇ ನಾಯಕ ಸಮುದಾಯದ ಶಾಸಕರು ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಸತೀಶ್​ ಜಾರಕಿಹೊಳಿ, ಯತ್ನಾಳ್ ಸೇರಿ ರಚಿಸಲಿರುವ ಕೆಡಿಎಫ್​ ಸರ್ಕಾರಕ್ಕೆ ಮಹಾರಾಷ್ಟ್ರದಿಂದಲೂ ಸರ್ವ ಸಹಕಾರ ದೂರೆತಿದೆ. ಈ ಹಿಂದೆ ಶಿವಸೇನೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದಿಂದ ಏಕನಾಥ್ ಶಿಂಧೆ, ಅಜಿತ್ ಪವಾರ್​ ತಮ್ಮ ಬೆಂಬಲಿತ ಶಾಕರೊಟ್ಟಿಗೆ ಹೇಗೆ ಹೊಸ ಮೈತ್ರಿ ಸರ್ಕಾರ ರಚಿಸಿದ್ರೋ ಅದೇ ಮಾದರಿಯಲ್ಲಿ ರಾಜ್ಯದ ಮೂರು ಪಕ್ಷಗಳ ರೆಬಲ್ಸ್ ನಾಯಕರು ಸೇರಿ ಸರ್ಕಾರ ರಚಿಸಲಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿಗೆ ಹಾಗೂ ರಮೇಶ್​ ಜಾರಕಿಹೊಳಿಗೆ ಮಹಾರಾಷ್ಟ್ರದ ನಂಟಿದೆ. ಈ ಕಾರಣಕ್ಕಾಗಿ ಮಹಾರಾಷ್ಟ್ರದಿಂದ ಮಾರ್ಗದರ್ಶನ, ಕಾನೂನು ನೆರವು, ಸಂಪನ್ಮೂಲ ಕ್ರೂಢೀಕರಣ ಸೇರಿದಂತೆ ಶಾಸಕರ ಆಪ್​ರೇಷನ್​ಗೂ ಸಹ ಮಹಾರಾಷ್ಟ್ರ ನಾಯಕರಿಂದ ಕೆಡಿಎಫ್​ ಸರ್ಕಾರ ರಚನೆಗೆ ಸಹಕಾರ ದೊರೆಯಲಿದೆ.

ಒಟ್ನಲ್ಲಿ, ಎಲ್ಲವೂ ಕಾರ್ಯರೂಪಕ್ಕೆ ಬಂದಲ್ಲಿ, ಅಕ್ಟೋಬರ್ ರಾಜ್ಯದಲ್ಲಿ ಸತೀಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕರ್ನಾಟಕ ಡೆವಲಪ್​ಮೆಂಟ್​ ಫ್ರಂಟ್ ಎಂಬ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ

Comments (0)

Your email address will not be published. Required fields are marked *

Back to top button