ರಾಜಕೀಯ

ಹನಿಟ್ರ್ಯಾಪ್​ಗೆ ಬಂದವ್ರು..ಹತ್ಯೆಗೆ ಯತ್ನಿಸಿದ್ರು; MLC ರಾಜೇಂದ್ರ ಹೊಸ ಬಾಂಬ್

ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಸಚಿವ ರಾಜಣ್ಣ ಪುತ್ರ ಎಂಎಲ್​ಸಿ ರಾಜೇಂದ್ರ ಕೊನೆಗೂ ಈ ಸಂಬಂಧ ದೂರ ದಾಖಲಿಸಿದ್ದಾರೆ. ಈ ಬಗ್ಗೆ ಡಿಜಿಪಿಗೆ ದೂರು ನೀಡಿ ರಾಜೇಂದ್ರ ಹನಿಟ್ರ್ಯಾಪ್​ಗೆ ಬಂದವರು, ಹತ್ಯೆಗೆ ಯತ್ನಿಸಿದ್ರು ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು,ನಾನು ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ. ಸಚಿವರು ಕೂಡ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನನ್ನ ಮೇಲೆ ಹನಿಟ್ರ‍್ಯಾಪ್ ಆಗಿಲ್ಲ, ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಾ ಇತ್ತು ಎಂದು ಹೇಳಿದರು

ಇನ್ನು ನವೆಂಬರ್ 16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕೋಕೆ ಸ್ವಲ್ಪ ಜನ ಬಂದಿದ್ರು. ಆ ಸಂದರ್ಭದಲ್ಲಿ ಹತ್ಯೆ ಮಾಡಲು ಪ್ರಯತ್ನ ಮಾಡಿದ್ರು ಎಂದು ಸೋಮ, ಭರತ್ ಇಬ್ಬರ ಹೆಸರನ್ನು ಉಲ್ಲೇಖ ಮಾಡಿದರು.

ನನಗೆ ಇದು ಜನವರಿಯಲ್ಲಿ ಮಾಹಿತಿ ಸಿಕ್ಕಿತು. ನನ್ನ ಆಪ್ತರ ಮೂಲಕ ಆಡಿಯೋ ಸಿಕ್ಕಿತು. ಆಡಿಯೋದಲ್ಲಿ 5 ಲಕ್ಷ ಸುಪಾರಿ ನೀಡಿದ್ರು. ಮೂರು ಜನ ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಈ ಸಂಬಂಧ ಎಸ್ಪಿಗೆ ದೂರು ನೀಡಲು ಡಿಜಿ ಹೇಳಿದ್ದಾರೆ ಎಂದು ತಿಳಿಸಿದರು

ರಾಜಣ್ಣ ಹನಿಟ್ರ‍್ಯಾಪ್ ಪ್ರಕರಣ ಸಿಐಡಿಗೆ ಹೋಗಿದೆ, ಮನೆಯ ಬಳಿ ಸಾಕ್ಷ್ಯಾಧಾರ ಕಲೆ ಹಾಕೋದಕ್ಕೆ ಪೊಲೀಸರು ಹೋಗಿದ್ದಾರೆ. ಜಯಮಹಲ್ ರಸ್ತೆಯ ಮನೆಯಲ್ಲಿ ಪರಿಶೀಲನೆ ಮಾಡ್ತಾ ಇದ್ದಾರೆ. ಮನೆ ಕೆಲಸದವರ ಹೇಳಿಕೆ ಪಡೆದಿದ್ದಾರೆ. ಈ ಪ್ರಕರಣದ ಹಿಂದಿರುವ ಮಹಾನಾಯಕ ಯಾರು ಅನ್ನೋದು ಯಾರು ಅನ್ನೋದು ಗೊತ್ತಿಲ್ಲ. ನಾನು ಯಾರ ಹೆಸರನ್ನು ಕೂಡ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ರು.

Comments (0)

Your email address will not be published. Required fields are marked *

Back to top button