ರಾಜಕೀಯ

ಯಮುನಾ ಸ್ವಚ್ಚತಾ ಕಾರ್ಯಾರಂಭ..

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ವಾರದೊಳಗೆ ಯಮುನಾ ನದಿ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ಫೆ. 5ರಂದು ನಡೆದ ದೆಹಲಿ ಚುನಾವಣೆಯಲ್ಲಿ ಯಮುನಾ ನದಿ ಸ್ವಚ್ಚತಾ ವಿಷಯ ಭಾರಿ ಚರ್ಚೆಗೆ ಕಾರಣವಾಗಿತ್ತು. ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ನದಿ ಸ್ವಚ್ಚಗೊಳಿಸುತ್ತೇವೆಂದು ಎಎಪಿ ದೆಹಲಿ ಜನತೆಗೆ ಭರವಸೆ ನೀಡಿತ್ತು.

ಆದರೆ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಆಪ್ ಸರ್ಕಾರ ವಿಫಲವಾಗಿತ್ತು. ಈ ಹಿನ್ನಲೇಯಲ್ಲಿ ಇದನ್ನೇ ಚುನಾವಣೆಯ ದಾಳವನ್ನಾಗಿಸಿಕೊಂಡ ಬಿಜೆಪಿ ಸರ್ಕಾರ ಆಪ್ ಸರ್ಕಾರವನ್ನು ಮಣಿಸಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು.

ಬಿಜೆಪಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಇದೀಗ ಯಮುನಾ ನದಿ ಸ್ವಚ್ಚತಾ ಕಾರ್ಯಾರಂಭ ಆಗಿದೆ. ಮೂರು ವರ್ಷಗಳಲ್ಲಿ ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರುವ ನಾಲ್ಕು ಹಂತದ ಕಾರ್ಯತಂತ್ರವನ್ನು ಇದಕ್ಕಾಗಿ ರೂಪಿಸಲಾಗಿದೆ.

Comments (0)

Your email address will not be published. Required fields are marked *

Back to top button