Top Newsರಾಜಕೀಯರಾಜ್ಯ

ಸುವರ್ಣಸೌಧದಲ್ಲಿ ವಡ್ಡ ಪದ ಬಳಕೆ: ಡಿಸಿಎಂ ಡಿ ಕೆ ಶಿವಕುಮಾರ್ ವಿಷಾದ

ಬೆಳಗಾವಿ: ಸುವರ್ಣ ವಿಧಾನಸಭೆಯಲ್ಲಿ ಮಾಜಿ ಸಿಎಂ ದಿವಂಗತ ಎಸ್. ಎಂ. ಕೃಷ್ಣ ಅವರಿಗೆ ತಾವು ಸಂತಾಪ ಸೂಚಿಸಿ ನಿನ್ನೆ ಮಾತನಾಡುವಾಗ ವಡ್ಡ ಪದ ಬಳಸಿದ್ದರಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುವುದಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಭೋವಿ ಸಮುದಾಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಬರದಲ್ಲಿ ಆ ಪದ ಬಳಸಿದ್ದೇಯೇ ಹೊರತು ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ಅಲ್ಲ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಕೆಶಿ ಪದ ಬಳಕೆಯ ಬಗ್ಗೆ ಏನು 

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಸಂತಾಪ ಸೂಚಿಸುವ ವೇಳೆ ಡಿಕೆ ಶಿವಕುಮಾರ್ ಸಮುದಾಯಕ್ಕೆ ಅವಮಾನವಾಗುವ ಪದ ಬಳಕೆ ಮಾಡಿದ್ದಾರೆ. ಬಾಲ್ಯದಲ್ಲಿ ನಾನು ಬಟ್ಟೆ ಹಾಕದೇ ***** ಆಗಿದ್ದೆ ಎಂಬ ಪದ ಬಳಸಿದ್ದಾರೆ. ಈ ಪದ ಬಳಕೆಯ‌ನ್ನು ನಾವು ಖಂಡಿಸುತ್ತೇವೆ ಅಂತ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button