Top Newsಉಪ ಚುನಾವಣೆರಾಜಕೀಯರಾಜ್ಯಸುದ್ದಿ

2028ರ ಚುನಾವಣೆಯ ಗೆಲುವಿಗೆ ಇದು ಮುನ್ನುಡಿ: ಡಿಕೆ ಶಿವಕುಮಾರ್‌

ಬೆಂಗಳೂರು: ಸುಳ್ಳನ್ನು ಹೇಳಿ ಅಪ್ರಚಾರ ಮಾಡಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದಾರೆ. ಉಪ ಚುನಾವಣೆಯ ಗೆಲುವು 2028ರ ವಿಧಾನಸಭೆ ಚುನಾವಣೆಗೆ ಗೆಲುವಿಗೆ ಮುನ್ನುಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಬಣ್ಣಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹೆಚ್​ಡಿಕೆ ಮಂಡ್ಯ ಕ್ಷೇತ್ರದ ಸಂಸದರಾಗಿದ್ದಾರೆ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಕುರುಹುಗಳಿಗೆ ಜನ ಉತ್ತರ ನೀಡಿದ್ದಾರೆ. ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲೂ ನಾವು ಗೆದ್ದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಶಿಗ್ಗಾಂವಿಯಲ್ಲಿ ಭರತ್ ಸೋಲು ಅನ್ನೋದು ಹೇಳಲ್ಲ. ಅಲ್ಲಿ ಈ ಹಿಂದೆ ನಮ್ಮ ಅಭ್ಯರ್ಥಿ ಸೋತಿದ್ದರು. ಈಗ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಸಂಡೂರಿಲ್ಲಿನಲ್ಲೂ ನಾವು ಗೆದ್ದಿದ್ದೇವೆ. ಈ ಮೂರು ಚುನಾವಣೆ ನಮ್ಮ ಗ್ಯಾರಂಟಿ ಮತ್ತು ಅಭಿವೃದ್ಧಿಗೆ ಕೈಗನ್ನಡಿಯಾಗಿದೆ, ಸುಳ್ಳನ್ನು ಹೇಳಿ ಅಪ್ರಚಾರ ಮಾಡಿದ್ದರು, ಆದರೆ ಮತದಾರರು ಪ್ರಜ್ಞಾವಂತರಿದ್ದಾರೆ ಎಂದು ಹೇಳಿದರು.

ವಿಪಕ್ಷಗಳು ನಮ್ಮ ಗ್ಯಾರಂಟಿಯನ್ನು ಟೀಕೆ ಮಾಡಿದ್ದವು. ವಿಪಕ್ಷಗಳು ಟೀಕೆ ಮಾಡುವುದನ್ನು ಬಿಡಿ ಎಂದು ಜನ ತೀರ್ಪು ಕೊಟ್ಟಿದ್ದಾರೆ. ಜನರ ಬದುಕಿನ ಮೇಲೆ ರಾಜಕೀಯ ಮಾಡಬೇಡಿ ಅಂತ ಸಂದೇಶ ಜನ ಕೊಟ್ಡಿದ್ದಾರೆ. ಟೀಕೆಗಳು ಸಾಯ್ತವೇ, ಕೆಲಸ ಉಳಿಯತ್ತವೆ. ಇದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

ಜನರಿಗೆ ಸರಿಯಾಗಿ ಗ್ಯಾರಂಟಿ ಹೋಗುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿದ್ದವು. 56 ಸಾವಿರ ಕೋಟಿ ರೂ. ಗ್ಯಾರಂಟಿ ಗೆ ಕೊಟ್ಟಿದ್ದೇವೆ. ಪ್ರತಿ ಕ್ಷೇತ್ರಕ್ಕೆ 200 ಕೋಟಿ ರೂ. ಹಣ ಹೋಗಿದೆ. ಇದೆಲ್ಲವು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.

Comments (0)

Your email address will not be published. Required fields are marked *

Back to top button