#Exclusive NewsTop Newsಉಪ ಚುನಾವಣೆರಾಜಕೀಯರಾಜ್ಯಸುದ್ದಿ

ಸಿಎಂ ಸಿದ್ದುಗೆ ಮುಡಾ ನೋಟಿಸ್​ ; ಸಚಿವ ಸತೀಶ್​ ಜಾರಕಿಹೊಳಿ ಹಿಂಗ್ಯಾಕಂದ್ರು ?

ಹುಬ್ಬಳ್ಳಿ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಕುದ್ದು ಹಾಜರಾಗಲು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಹಾಜರಾಗಲೇಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಿಂದ ನೋಟಿಸ್ ಬಂದಾಗ ಯಾರೇ ಆದರೂ ಹಾಜರಾಗಲೇಬೇಕು, ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು-ಸಚಿವ ಸತೀಶ್​ ಜಾರಕಿಹೊಳಿ

ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು-ಸಚಿವ ಸತೀಶ್​ ಜಾರಕಿಹೊಳಿ

 

ನೋಟಿಸ್ ನಲ್ಲಿ ಕುದ್ದು ಹಾಜರಾಗಿ ಎಂದು ಹೇಳೋದು ಸಹಜ. ಸಿಎಂ ಅವರು ಕುದ್ದು ಹಾಜರಾಗಬಹುದು. ಅಥವಾ ತಮ್ಮ ಪರವಾಗಿ ವಕೀಲರನ್ನು ಕಳಿಸಬಹುದು. ಇಲ್ಲವೇ ಸಮಯ ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯೆ ನೀಡಿದರು. ಇನ್ನೂ ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಇಂದು ಹುಬ್ಬಳ್ಳಿಯಲ್ಲಿ ಸಭೆ ನಡೆಸಿಲ್ಲ, ಎಲ್ಲರಿಗೂ ಅವರವರ ಜವಾಬ್ದಾರಿ ಬಗ್ಗೆ ತಿಳಿಸಿದ್ದೇವೆ. ಇಂದಿನಿಂದ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳಲಿದೆ. ಚುನಾವಣೆ ಪೂರ್ಣಗೊಳುವವರೆಗೆ ಮಂತ್ರಿಗಳು, ಶಾಸಕರು, ಮುಖಂಡರು ಶಿಗ್ಗಾಂವಿಯಲ್ಲಿಯೇ ಇರಬೇಕೆಂದು ಸಿಎಂ ಸೂಚನೆ ನೀಡಿದ್ದಾರೆ. ಇವತ್ತಿಂದ ಎಲ್ಲರೂ ಪ್ರಚಾರದಲ್ಲಿ ಧುಮುಕುತ್ತಾರೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button