#Exclusive NewsTop Newsರಾಜಕೀಯಸುದ್ದಿ

ಕಾಂಗ್ರೆಸ್ ಸಂಸದರಾದ ಕುಮಾರ್ ನಾಯಕ್ ಮತ್ತು ತುಕಾರಾಂ ರಾಜೀನಾಮೆ ನೀಡಬೇಕು: ಲೆಹರ್ ಸಿಂಗ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಎಸ್‌ಟಿ ಅಭಿವೃದ್ಧಿ ನಿಗಮದ ಪ್ರಕರಣಗಳಲ್ಲಿ ಕಾಂಗ್ರೆಸ್ ಸಂಸದರಾದ ಜಿ.ಕುಮಾರ್ ನಾಯಕ್ ಮತ್ತು ಇ.ತುಕಾರಾಂ ಅವರು ರಾಜೀನಾಮೆ ನೀಡಿ, ಸ್ವತಂತ್ರ ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರು ಆಗ್ರಹಿಸಿದ್ದಾರೆ.

ಆಗ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ ಅವರು ಅಸ್ತಿತ್ವದಲ್ಲಿಲ್ಲದ ಭೂಮಿಯನ್ನು ಪರಿವರ್ತಿಸಿದರು ಮತ್ತು ಇದು ಹಗರಣಕ್ಕೆ ಕಾರಣವಾಯಿತು ಎಂದು ಬಿಜೆಪಿ ಸಂಸದ ಆರೋಪಿಸಿದ್ದಾರೆ.

ಮುಡಾ ಹಗರಣದಲ್ಲಿ ಕುಮಾರ್ ನಾಯಕ್ ಪಾತ್ರದ ಬಗ್ಗೆ ಎಲ್ಲರೂ ಯಾಕೆ ಮೌನವಾಗಿದ್ದಾರೆ? ಕುಮಾರ್ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಅವರು ಸಲ್ಲಿಸಿದ್ದ ಸುಳ್ಳು ವರದಿ ಬಗ್ಗೆ ಹೈಕೋರ್ಟ್ ತೀವ್ರ ಟೀಕೆ ಮಾಡಿದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಮತದಾರರಿಗೆ ಲಂಚ ನೀಡಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಡಿ ಚಾರ್ಜ್ ಶೀಟ್ ಬಹಿರಂಗಪಡಿಸಿದೆ. ಹೀಗಾಗಿ ಈ ಇಬ್ಬರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಲೆಹರ್ ಸಿಂಗ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಮುಡಾ ಹಗರಣದಲ್ಲಿ ಹೆಚ್ಚಿನ ಲಾಭ ಪಡೆದಿರುವ ಸಿದ್ದರಾಮಯ್ಯ ಜೊತೆಗೆ ಕುಮಾರ್ ನಾಯಕ್ ಸಹ ರಾಜೀನಾಮೆ ನೀಡಬೇಕು. ಅವರು ಸ್ವಯಂಪ್ರೇರಣೆಯಿಂದ ತನಿಖೆಗೆ ಸಹಕರಿಸಬೇಕು. ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತರು ಈ ಬಗ್ಗೆ ಗಮನಹರಿಸಿ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಒತ್ತಾಯಿಸಿದ್ದಾರೆ.

ವಾಲ್ಮೀಲಿ ಹಗರಣದ ಆರೋಪಿ, ಮಾಜಿ ಸಚಿವ ಬಿ ನಾಗೇಂದ್ರ ಅವರು ಜಾಮೀನು ಪಡೆದ ನಂತರ ಕ್ಲೀನ್ ಚಿಟ್ ನೀಡಲು ಪ್ರಯತ್ನಿಸಿದರೂ ರಾಜ್ಯದ ಹಣಕಾಸು ಸಚಿವರು ಮತ್ತು ಹಣಕಾಸು ಕಾರ್ಯದರ್ಶಿ ಕೂಡ ಈ ಪ್ರಕರಣದ ಬಿಸಿ ಎದುರಿಸಬೇಕಾಗುತ್ತದೆ” ಎಂದು ಬಿಜೆಪಿ ಸಂಸದರು ಎಚ್ಚರಿಸಿದ್ದಾರೆ.

Comments (0)

Your email address will not be published. Required fields are marked *

Back to top button