#Exclusive NewsTop Newsಫ್ರೀಡಂ ಟಿವಿ ವಿಶೇಷರಾಜಕೀಯರಾಜ್ಯವಿಶೇಷಸುದ್ದಿ

ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಫಲವನ್ನೇ ಪಡೆಯದ ಮಹಿಳೆಯರು ರಾಜ್ಯದಲ್ಲಿ ಇನ್ನು 1.82 ಕೋಟಿ ಮಹಿಳೆಯರಿದ್ದಾರೆ

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ರಾಜ್ಯದ 1.82 ಲಕ್ಷ ಮಹಿಳೆಯರು ಫಲಾನುಭವಿ ಆಗುವುದಕ್ಕೇ ಸಾಧ್ಯವಾಗಿಲ್ಲ. ಇದಕ್ಕಿರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಅಭಿಯಾನದ ಮಾದರಿಯಲ್ಲಿ ಫಲಾನುಭವಿಗಳ ದತ್ತಾಂಶ ವಿಲೀನ ಪ್ರಕ್ರಿಯೆ ನಡೆಸುವಂತೆ ಬ್ಯಾಂಕ್‌ಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಂಡು 1 ವರ್ಷ ಪೂರೈಸಿದ್ದು, ಇದುವರೆಗೆ 26,260 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ರಾಜ್ಯ ಸರ್ಕಾರ ಜಮೆ ಮಾಡಿದೆ. ಎಲ್ಲ ದಾಖಲೆಗಳನ್ನು ನೀಡಿದ್ದ ಫಲಾನುಭವಿಗಳಿಗೆ ಮಾತ್ರ ಹಣ ಜಮೆ ಆಗುತ್ತಿದ್ದು, ದಾಖಲೆಗಳಿದ್ದರೂ ತಾಂತ್ರಿಕ ಅಡಚಣೆಗಳಿಂದ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ತೆಕ್ಕೆಯಿಂದ ಹೊರಗುಳಿಯುವಂತಾಗಿದೆ.
ಹೊರಗುಳಿಯಲು ಕಾರಣಗಳೇನು?: ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರು ಮಂಡಿಸಿರುವ ಕಡತದಲ್ಲಿ ಈ ಬಗ್ಗೆ ಉಲ್ಲೇಖಗಳಿವೆ. ಪ್ರಮುಖವಾಗಿ ಇ-ಕೆವೈಸಿ ತಲುಪಿಯೇ ಇಲ್ಲ. ಸಣ್ಣಮಾಹಿತಿಯನ್ನೂ ಬಿಡಬೇಡಿ:

ಯೋಜನೆಯಿಂದ ಹೊರಗುಳಿದಿರುವ ಯಾವುದೇ ಫಲಾನುಭವಿಯ ಸಣ್ಣ ಮಾಹಿತಿಯಿದ್ದರೂ ಕೊಡುವಂತೆ ಬ್ಯಾಂಕ್‌ಗಳು ಎಸ್‌ಎಲ್‌ಬಿಸಿಗೆ ಮನವಿ ಮಾಡಿದ್ದು, ಹೆಸರು,  ವಿಳಾಸ, ಆಧಾರ್ ಸಂಖ್ಯೆ, ಮತದಾರರ
ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಹೀಗೆ ಯಾವ್ಯಾವ ಮಾಹಿತಿ ಇದೆಯೋ ಅದೆಲ್ಲವನ್ನೂ ನೀಡುವಂತೆ ಕೋರಿದೆ. ಅಭಿಯಾನ ಮಾದರಿಯಲ್ಲಿ ಫಲಾನುಭವಿಗಳಿಗೆ ಹಣ ಜಮೆ ಆಗುವಂತೆ ಬ್ಯಾಂಕ್ ಗಳೂ ಆಸಕ್ತಿ ವಹಿಸಬೇಕೆಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ಕೊಟ್ಟಿದ್ದಾರೆ.ವಿಫಲಗೊಂಡಿರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ವಿಲೀನಗೊಳ್ಳದೇ ಇರುವುದು, ಎನ್ ಪಿಸಿಬಿ (ಭೀಮ್ ಆ್ಯಪ್) ಮ್ಯಾಪಿಂಗ್ ಮಾಡುವುದರಲ್ಲಿ ಆಗಿರುವ ವೈಫಲ್ಯಗಳ ಫಲವಾಗಿ ರಾಜ್ಯದ 1.82 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 36.40 ಕೋಟಿ ರೂ.

Comments (0)

Your email address will not be published. Required fields are marked *

Back to top button