ದುಡ್ಡಿದ್ರ ದುನಿಯಾ.. ಜೈಲ್ ಉಳ್ಳವರಿಗೆ ಸ್ವರ್ಗ.. ಬಡವರಿಗೆ ನರಕ.. ಏನಿದು ಇದೇನಿದು ಗೃಹ ಮಂತ್ರಿಗಳೇ.!?

ಬೆಂಗಳೂರು : ಫೋಟೋ ಆಯ್ತು ಇದೀಗ ವಿಡಿಯೋ ಕಾಲ್, ಕೊಲೆ ಆರೋಪಿ ಜೈಲಿನಲ್ಲಿರುವ ನಟ ದರ್ಶನ್ ಇರುವ ವೀಡಿಯೊ ಕಾಲ್ ಸದ್ಯ ಎಲ್ಲೆಡೆಯೂ ವೈರಲ್ ಆಗುತ್ತಿದೆ. ತನ್ನ ಅಪ್ತನು ಆಗಿರುವ ರೌಡಿಶೀಟರ್ ಒಬ್ಬನ ಜೊತೆ ವೀಡಿಯೊ ಕಾಲ್ ನಲ್ಲಿ ಅತ್ಯಾಪ್ತವಾಗಿ ಮಾತಾಡಿರೊ ದರ್ಶನ್, ಊಟ ಆಯ್ತಾ ಆರಾಮಾಗಿದ್ದೀನಿ ಅಂತಾ ಮಾತುಕತೆ ನಡೆಸಿದ್ದಾನೆ. ಇನ್ನು ಜೈಲಿನಲ್ಲಿದ್ದುಕೊಂಡು ವಿಡಿಯೋ ಕಾಲ್ ಮಾಡಿರೋದು ಬಾಣಸವಾಡಿ ರೌಡಿಶೀಟರ್ ಕೊಲೆ ಆರೋಪಿ ಧರ್ಮ
ಬಾಣಸವಾಡಿ ರೌಡಿಶೀಟರ್ ಕಾರ್ತಿಕೇಯ ಕೊಲೆ ಪ್ರಕರಣದ ಆರೋಪಿ ಆಗಿದ್ದಾನೆ. ಇವನ ಮೇಲೆ
ಕೊಲೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಪ್ರಯೋಗಿಸಲಾಗಿದೆ, ಕಳೆದ ಮೇ 7 ರಂದು
ಬಾಣಸವಾಡಿ ರೌಡಿ ಶೀಟರ್ ಕಾರ್ತಿಕೇಯನ್ ಎಂಬಾತನ ಕೊಲೆಯಾಗಿತ್ತು,ಈ
ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಧರ್ಮ ಸದ್ಯ ಜೈಲಿಂದಲೆ ವಿಡಿಯೋ ಕಾಲ್ ನಲ್ಲಿ ಕೊಲೆ ಆರೋಪಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದಾನೆ. ಧರ್ಮ ಜೈಲಿನಿಂದ ವಿಡಿಯೋ ಕಾಲ್ ಮಾಡಿ,
ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ @ ಜನಾರ್ದನ್ ಮಗ ಸತ್ಯ ಎಂಬುವವನಿಗೆ ವಿಡಿಯೋ ಕಾಲ್ ಮಾಡಿ ದರ್ಶನ್ ನನ್ನು ತೋರಿಸಿದ್ದಾನೆ. ಇನ್ನು ರೌಡಿಶೀಟರ್ ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ
ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ
ಉಲ್ಟಾ ಮಚ್ಚಲ್ಲಿ ಕೆ ಎಲ್ ಇ ಕಾಲೇಜ್ ವಿಧ್ಯಾರ್ಥಿಗಳಿಗೆ ಹೊಡೆದಿದ್ದ ಪ್ರಕರಣದಲ್ಲಿ
ಜೈಲಿಗೆ ಹೋಗಿ ಸಧ್ಯ ಬೇಲ್ ಮೇಲೆ ಹೊರಗೆ ಬಂದಿದ್ದ. ಆರೊಪಿ ಸತ್ಯ ಜೈಲಿನಲ್ಲಿದ್ದಾಗ ಧರ್ಮನ ಜೊತೆಯಿದ್ದ ಸದ್ಯ ಹೊರಬಂದವನು ಇತ್ತೀಚೆಗೆ ಮಾರ್ಕೆಟ್ ಧರ್ಮ ನಿಗೆ ವಿಡಿಯೋ ಕಾಲ್ ಮಾಡಿದ್ದ, ಈ ವೇಳೆ ಕೊಲೆ ಆರೋಪಿ
ದರ್ಶನ್ ನಮ್ ಸೆಲ್ ಪಕ್ಕದಲ್ಲೆ ಇರೋದು ಎಂದಿದ್ದ ಮಾರ್ಕೆಟ್ ಧರ್ಮ,
ಇರು ತೋರಿಸ್ತಿನಿ ಎಂದು ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ, ಅದನ್ನ ರೆಕಾರ್ಡ್ ಮಾಡಿಕೊಂಡು ಏರಿಯಾದಲ್ಲಿ ಬಿಲ್ಡಪ್ ಕೊಟ್ಟಿದ್ದ ಸತ್ಯ ಈ ರೆಕಾರ್ಡ್ ಅನ್ನು ಕಲಾಸಿಪಾಳ್ಯದ ಕೆಲ ಹುಡುಗರಿಗೂ ವಿಡಿಯೋ ಕಳಿಸಿದ್ದ ಎನ್ನಲಾಗುತ್ತಿದೆ. ಸದ್ಯ ಜೈಲ್ ಬಡವರಿಗೆ ಸೇಫ್ ಅಲ್ಲ ಧನಂತಿಗೆ ಸ್ವರ್ಗ ಎಂದು ಮತ್ತೋಮ್ಮೆ ಸಾಭಿತಾಗಿದೆ..




