Freedom TVರಾಜಕೀಯ

ಪುನೀತ್ ಕೆರೆಹಳ್ಳಿಗೆ ಸಂಘ ‘ಬಲ’

ಕೇಸರಿ ಕಾರ್ಯಕರ್ತ ಪುನೀತ್​ ಕೆರೆಹಳ್ಳಿಗೆ ಒಳ್ಳೆ ಮೈಲೇಜ್​ ಸಿಕ್ತಿದೆ. ಕಾಂಗ್ರೆಸ್​ ಸರ್ಕಾರದಿಂದ ರೌಡಿ ಶೀಟರ್ ಓಪನ್​ ಮಾಡಿಸಿಕೊಂಡಿದ್ದ ಕೆರೆಹಳ್ಳಿಗೆ ಇದೀಗ ಬಿಜೆಪಿಯ ಭೀಮಬಲ ಸಿಕ್ಕಿದೆ. ನಾಯಿ ಮಾಂಸ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಕೆರೆಹಳ್ಳಿಗೆ ಬಿಜೆಪಿ ನಾಯಕರ ಬೆಂಬಲ ಸಿಕ್ಕಿದೆ. ಮಾಜಿ ಸಂಸದ ಪ್ರತಾಪ್​ ಸಿಂಹ ಅವರೆ ಖುದ್ದು ಪುನೀತ್​ ಕೆರೆಹಳ್ಳಿಯನ್ನು ಸಹೋದರ ಎಂದು ಕರೆದಿದ್ದಾರೆ. ಜೊತೆಗೆ ಪೊಲೀಸ್​​ ಠಾಣೆಗೆ ತೆರಳಿ ಪುನೀತ್​ ಪರ ಪ್ರತಿಭಟನೆ ನಡೆಸಿದ್ದಾರೆ. ಪುನೀತ್​ ರನ್ನು ತಲೆಹಿಡುಕ, ಕಳ್ಳ, ಡಕಾಯಿತ, ಕೊಲೆಗಾರ ಎಂದೆಲ್ಲಾ ಕರೆಯುವವರ ಗುಂಪು ಒಂದೆಡೆಯಿದೆ. ಮತ್ತೊಂದೆಡೆ ಪುನೀತ್ ನನ್ನು ನಮ್ಮವನೆಂದು ಅಪ್ಪಿಕೊಳ್ಳುತ್ತಿದೆ. ಬಿಜೆಪಿ ಸಪೋರ್ಟ್​ ಸಿಕ್ಕಿರುವುದು ಕೆರೆಹಳ್ಳಿಯ ಲಕ್ ಕುದುರುವ ಲಕ್ಷಣಗಳಿವೆ.

Comments (0)

Your email address will not be published. Required fields are marked *

Back to top button