ರಾಜಕೀಯ

ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ, ಸಮಯ ಕೋಡೊದಕ್ಕೆ ಸಾಧ್ಯ ಇಲ್ಲ – ಡಾ. ಜಿ ಪರಮೇಶ್ವರ್

ಕಲಬುರಗಿ : ಪ್ರಜ್ವಲ್ ರೇವಣ್ಣನ ಕೇಸ್ ರಾಷ್ಟ್ರ ಮಟ್ಟದಲ್ಕಿ ಚರ್ಚೆ ಆಗ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಗುರುವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು, ಇವಾಗ ಇತರೆ ರಾಷ್ಟ್ರಗಳಿಗೂ ಈ ವಿಷಯ ತಲುಪಿದೆ. ನೂರಾರು ಜನ ಮಹಿಳೆಯರಿಗೆ ಅನ್ಯಾಯ ಆಗಿದೆ. ಹಿಂದೆ ನಮ್ಮ ಗಮನಕ್ಕೆ ಬಂದಿಲ್ವಾ ಅಂತಾ ನೀವು ಕೇಳಬಹುದು. ಆದರೆ ದೂರು ಯಾರು ನೀಡಿರಲಿಲ್ಲ, ಮಹಿಳಾ ಆಯೋಗದ ಗಮನಕ್ಕೆ ಬಂದ ತಕ್ಷಣ ದೂರು ನೀಡಿದ್ದಾರೆ ಎಂದರು.

ತಕ್ಷಣ ಎಸ್ ಐ ಟಿ ರಚನೆ ಮಾಡಿ ತನಿಖೆ ಮಾಡ್ತಿದ್ದಾರೆ. ದೂರು ದಾಖಲಾಗ್ತಿದ್ದ ಹಾಗೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಹೊರ ದೇಶಕ್ಕೆ ಹೋಗುವಾಗ ಅವರಿಗೆ ಡಿಪ್ಲೋಮೇಟಿಕ್ ಪಾಸ್ ಪೋರ್ಟ್ ಕೊಟ್ಟಿದೆ ಕೇಂದ್ರ ಸರ್ಕಾರ, ಡಿಪೋಮೇಟಿಕ್ ಪಾಸ್ ಪೋರ್ಟ್ ಗೆ ಹೆಚ್ಚಿನ ಪ್ರಶ್ನೆ ಮಾಡಲ್ಲ ಎಂದು ತಿಳಿಸಿದರು.

41(a) ಸೆಕ್ಷನ್ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. 41(a) ಯಲ್ಲಿ 24 ಗಂಟೆಯ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಹಾಜರಾಗದೆ‌ ಇದ್ರೆ ರೇವಣ್ಣ ಅವರನ್ನ ಬಂಧಿಸಬೇಕಾಗುತ್ತೆ, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೇರಳಿದ ಹಿನ್ನಲೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ. ಸಮಯ ಕೋಡೊದಕ್ಕೆ ಸಾಧ್ಯ ಇಲ್ಲ ಈ ಪ್ರಕರಣದಲ್ಲಿ ಹಾಗಾಗಿ ಅವರಿಗೆ ಅರೆಸ್ಟ್ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲು ಎಸ್ ಐ ಟಿ ಮುಂದುವರೆಯುತ್ತೆ ಎಂದು ಡಾ ಜಿ ಪರಮೇಶ್ವರ್ ಹೇಳಿದರು.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button