ಕ್ರಿಕೆಟ್ಸುದ್ದಿ

ಆರ್​ಸಿಬಿ ಹಸಿರು ಅಭಿಯಾನ: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗ್ರೀನ್​ ಜರ್ಸಿ ಮ್ಯಾಚ್​.

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪ್ರತಿ ಬಾರಿಯಂತೆ ಈ ಬಾರಿಯೂ ಗ್ರೀನ್​ ಜೆರ್ಸಯಲ್ಲಿ ಕಣಕ್ಕಿಳಿಯಲಿದೆ. ಏಪ್ರಿಲ್​ 23ರಂದು ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯಲಿದೆ. ಈ ಬಗ್ಗೆ ಆರ್​ಸಿಬಿ ಖಚಿತಪಡಿಸಿದೆ.

ಗ್ರೀನ್​ ಜೆರ್ಸಿಯಲ್ಲಿ ಆಟಗಾರರ ಪೋಟೋಶೂಟ್​ ನಡೆಸಿದ್ದು, ಅದರ ಪೋಟೋಗಳನ್ನು ಆರ್​​ಸಿಬಿ ಹಂಚಿಕೊಂಡಿದೆ. ಗೆಲುವಿನ ಲಯಕ್ಕೆ ಮರಳುವ ಸಿದ್ಧತೆ ನಡೆಸಿರುವ ಆರ್​ಸಿಬಿಗೆ ಶಾಕಿಂಗ್​ ನ್ಯೂಸ್​ ಹೊರ ಬಿದ್ದಿದೆ. ಗ್ರೀನ್​ ಜರ್ಸಿಯಲ್ಲಿ ಆರ್​​ಸಿಬಿ ಗೆದ್ದ ಇತಿಹಾಸ ಇಲ್ಲ.

ಹೌದು. ಬೆಂಗಳೂರು ತಂಡದ ಪಾಲಿಗೆ ಈ ಹಸಿರು ಜರ್ಸಿ ಅನ್​ಲೆಕ್ಕಿ ಎಂದೇ ಹೇಳಲಾಗುತ್ತದೆ. ಯಾಕಂದರೆ ಐಪಿಎಲ್‌ನಲ್ಲಿ ಆರ್​ಸಿಬಿ ಗ್ರೀನ್​ ಜರ್ಸಿಯಲ್ಲಿ ಆಡಿರುವ 11 ಪಂದ್ಯದಲ್ಲಿ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 8 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯವು ಫಲಿತಾಂಶ ಇಲ್ಲದೆ ಅಂತ್ಯ ಕಂಡಿತ್ತು.

2018ರಲ್ಲಿ ರಾಜಸ್ಥಾನ್ ವಿರುದ್ಧ ಹಸಿರು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಾಗ ಆರ್​​ಸಿಬಿ ಸೋಲನ್ನಪ್ಪಿತ್ತು. ಈ ಬಾರಿ ರಾಜಸ್ಥಾನ್​ ವಿರುದ್ಧವೇ ಕಣಕ್ಕಿಳಿಯಲಿದೆ. ಹಸಿರು ಜರ್ಸಿಯಲ್ಲಿ ಆರ್​ಸಿಬಿ 2011, 2012, 2013, 2014, 2017, 2018, 2019, 2020ರಲ್ಲಿ ಸೋಲು ಕಂಡಿದೆ. ಆದರೆ 2016, 2022ರಲ್ಲಿ ಗೆದ್ದಿದೆ. 2015ರಲ್ಲಿ ಫಲಿತಾಂಶ ಬಂದಿರಲಿಲ್ಲ.

ಈ ಹಸಿರು ಜೆರ್ಸಿ ಧರಿಸುವುದರ ಹಿಂದೆ ಮಹತ್ವದ ಉದ್ದೇಶವಿದೆ.  ಪರಿಸರ ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆರ್‌ಸಿಬಿ ಈ ವಿಭಿನ್ನ ಹಾದಿಯಲ್ಲಿ ಸಾಗಿದೆ. ಅಲ್ಲದೆ ಈ ಜರ್ಸಿಯನ್ನು ಶೇ 100% ಮರು ಬಳಕೆಯ ವಸ್ತುಗಳಿಂದ ತಯಾರಿಸಲಾಗಿರುತ್ತದೆ.

ಆರ್​ಸಿಬಿ 2011 ರಿಂದ ಹಸಿರು ಜೆರ್ಸಿಯನ್ನು ಧರಿಸುತ್ತಿದೆ. 2019ರ ನಂತರ ತವರು ಮೈದಾನದಲ್ಲಿ ಇದೇ ಮೊದಲ ಬಾರಿಗೆ ಈ ಜೆರ್ಸಿಯೊಂದಿಗೆ ಆಡುತ್ತಿದ್ದಾರೆ. 2020, 2021, 2022ರಲ್ಲಿ ಕೊರೊನಾ ಕಾರಣ RCB ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರಲಿಲ್ಲ

Comments (0)

Your email address will not be published. Required fields are marked *

Back to top button