ರಾಜಕೀಯಸುದ್ದಿ

ಆಂಧ್ರ ಸಿಎಂ ಗೆ ಕಲ್ಲೇಟು

ಕಲ್ಲು ತೂರಾಟದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಗಅಯಗಳಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೆಲವು ಕಿಡಿಗೇಡಿಗಳು ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಟ ನಡೆಸಿದ್ದರಿಂದ ಸಿಎಂ ಗಾಯಗೊಂಡಿದ್ದಾರೆ. ಜಗನ್ ಮೋಹನ್ ರೆಡ್ಡಿ “ಬಸ್ ಯಾತ್ರೆ” ನಡೆಸುತ್ತಿದ್ದಾಗ ಇ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಘಟನೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಆಂಧ್ರಪ್ರದೇಶ ಸಿಎಂ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ @ysjagan ಗಾಯ ಶೀಘ್ರವಾಗಿ ಚೇತರಿಸಿಕೊಳ್ಲಲು ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ ಜಗನ್ ಮೋಹನ್ ರೆಡ್ಡಿ ಮೇಲಿನ ಹಲ್ಲೆಯನ್ನು ಭಾರತ್ ರಾಷ್ಟ ಸಮಿತಿ ಮುಖಂಡ ಕೆ.ಟಿ ರಾಮರಾವ್ ಖಂಡಿಸಿದ್ದಾರೆ. ನೀವು ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ. ಟೇಕ್ ಕೇರ್ ಅಣ್ಣಾ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲಿನ  ಹಲ್ಲೆಯನ್ನು ಬಲವಾಗಿ ಖಂಡಿಸುತ್ತೇನೆ. ಎಮದು ಕೆಟಿರ್ ಟ್ವೀಟ್​ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button