ರಾಜಕೀಯರಾಜ್ಯಸುದ್ದಿ

ಕುಮಾರಸ್ವಾಮಿ ಹೇಳಿದ ತಕ್ಷಣ ಈ ಸರಕಾರ ಹೋಗಲ್ಲ- ಎನ್. ಎಸ್. ಬೋಸರಾಜು

ರಾಯಚೂರು : ಡಿಸೆಂಬರ್ ಬಳಿಕ ಸರಕಾರ ಬಿದ್ದು ಹೋಗ್ತದೆ ಎಚ್ ಡಿಕೆ ಹೇಳಿಕೆ ವಿಚಾರ ರಾಯಚೂರಲ್ಲಿ ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, ಕುಮಾರಸ್ವಾಮಿ ಎರಡೂ ಬಾರಿ ಮುಖ್ಯಮಂತ್ರಿಗಳು ಆದವರು. ಸ್ವತಃ ಬಲದಿಂದ ಎಂದಿಗೂ ಅವರ ಮುಖ್ಯಮಂತ್ರಿ ಆಗಿಲ್ಲ. ಅವರ ಯಜಮಾನರು ದೇವೆಗೌಡರು ಸ್ವತಃ ಬಲದಿಂದ ಪಿಎಂ ಆಗಿಲ್ಲ. ಕಾಂಗ್ರೆಸ್ ಪಕ್ಷದ ಬಲದಿಂದ ಪ್ರಧಾನ ಮಂತ್ರಿ ಆದವರು ಎಂದರು.

ಸಹಜವಾಗಿ ಯಾವ ಹಿಟ್ ಆ್ಯಂಡ್ ರನ್ ಮಾಡಬೇಕು ಮಾಡ್ತಾರೆ. ತಮ್ಮ ಬಳಿ ಇರೋ ಶಾಸಕರನ್ನ ಇಡಿದಿಟ್ಟುಕೊಳ್ಳಲು ಈ ತರ ಹೇಳ್ತಾರೆ. ಈ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಮುಂದಿನ 5 ವರ್ಷವೂ ಈ ಸರಕಾರ ಇರುತ್ತೆ. ಕುಮಾರಸ್ವಾಮಿ ಹೇಳಿದ ತಕ್ಷಣ ಈ ಸರಕಾರ ಹೋಗಲ್ಲ ಎಂದು ಹೇಳಿದರು.

ಮೋದಿ ಪಿಎಂ ಆದ್ರೂ ಬಿಜೆಪಿ ಸರಕಾರ ಸ್ವತಃ ಬಲದಿಂದ ಬಂದಿಲ್ಲ. ಹಿಂದಿನ ಡೋರ್ ನಿಂದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಿರೋದು. ಮೋದಿಯವರು ಓಣಿ ಓಣಿಯಲ್ಲೂ ರೋಡ್ ಶೋ ಮಾಡಿದ್ರು. ಮೋದಿ ಹೋದೆಲೆಲ್ಲ ಅಭ್ಯರ್ಥಿಗಳು ಸೋತರು. ಜನರ ದಾರಿ ತಪ್ಪಿಸಲು ಕುಮಾರಸ್ವಾಮಿ ಅವರು ಹೀಗೆ ಮಾತಾಡ್ತಾರೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button