
ಚಾಮರಾಜನಗರ : ಗಡಿಜಿಲ್ಲೆ ಚಾಮರಾಜನಗರ ಎಸ್.ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಮಲೆ ಮಹದೇಶ್ವರರ ಗಾಯನದ ಮೂಲಕ ಮತಬೇಟೆಯಲ್ಲಿ ತೊಡಗಿದ್ದಾರೆ.
ಮೂಲತಃ ಹಾಡುಗಾರರಾದ ಬಾಲರಾಜ್ ತಾವೇ ಹಾಡಿರುವ “ನಿನ್ನ ನೆನೆವಾ ಜೀವನ, ಆಯಿತಯ್ಯಾ ಪಾವನ” ಎಂಬ ಸಾಲುಗಳನ್ನೊಳಗೊಂಡ ಮಲೆ ಮಹದೇಶ್ವರರ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಒಂದು ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚುನಾವಣೆ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಮಾದಪ್ಪನ ಹಾಡು ಹಾಡುವ ಮೂಲಕ ಮತಬೇಟೆಯಲ್ಲಿ ತೊಡಗಿದ್ದಾರೆ.




