ಸುದ್ದಿ

ಕರ್ನಾಟಕ  ಗ್ರಾಮೀಣ  ಬ್ಯಾಂಕಿನ ಸಾಲ ವಸೂಲಾತಿ ವಿರುದ್ದ ರೈತರ ಆಕ್ರೋಶ!

ಬಳ್ಳಾರಿ:  ಕರ್ನಾಟಕ  ಗ್ರಾಮೀಣ  ಬ್ಯಾಂಕಿನ ಸಾಲ ವಸೂಲಾತಿ ವಿರುದ್ದ ರೈತರು ಪ್ರತಿಭಟಿಸಿದ್ದಾರೆ. ಸುಮಾರು 2 ವರ್ಷಗಳಿಂದ ಕರ್ನಾಟಕ  ಗ್ರಾಮೀಣ  ಬ್ಯಾಂಕ್​ ಸಾಲ ವಸೂಲಾತಿ ನೀತಿಯನ್ನು ಅನುಸರಿಸುತ್ತಿದ್ದು, ರೈತರನ್ನು ಶತೃಗಳ ರೀತಿ ನೋಡುತ್ತಿರುವುದರಿಂದ ರೈತರು ಅಸಮಾಧಾನಗೊಂಡು ಭುಗಿಲೆದ್ದಿದ್ದಾರೆ.

ಹೌದು.. ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನಲ್ಲಿ ರೈತರ ಗೋಳು ಕೇಳೋರಿಲ್ಲದ ಹಾಗೆ ಆಗಿದೆ. ಕೃಷಿ ಸಾಲದ ಅಸಲಿನಲ್ಲಿ ಶೇ. 50 ರಷ್ಟು ಸಾಲದ ಮರುಪಾವತಿಗೆ ಅನುಮತಿಸಬೇಕೆಂಬ ಬೇಡಿಕೆ ಪರಿಗಣಿಸುವಂತೆ ರೈತರು ಮನವಿ ಮಾಡಿದ್ದಾರೆ.

ಈ ಗ್ರಾಮೀಣ ಬ್ಯಾಂಕ್‌ ವಿರುದ್ಧ ಇದೇ ತಿಂಗಳು 28ನೇ ತಾರೀಕಿನಂದು  ಹೋರಾಟ ನಡೆಸಲು ರೈತರು ಮುಂದಾಗಿದ್ದು ಈ ಗ್ರಾಮೀಣ ಬ್ಯಾಂಕ್‌ ವಿರುದ್ಧ ಕ್ರಮ ತೆಗದುಕೊಳ್ಳಲು ಮನವಿ ಮಾಡಲಾಗಿದೆ. ಆದರೆ ಇದರ ಬಗ್ಗೆ ಗ್ರಾಮೀಣ ಬ್ಯಾಂಕ್‌ ಅಧಿಕಾರಿಗಳು ತುಟಿಕ್‌ ಪಿಟಿಕ್‌ ಅಂದಿಲ್ಲ. ಇದರಿಂದಾಗಿ ರೈತರು ರೊಚ್ಚಿಗೆದ್ದಿದ್ದು, ಪ್ರತಿಯೊಬ್ಬರೂ ಪ್ರತಿಭಟನೆಗೆ ಬರಲೇಬೇಕೆಂದು ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button