ರಾಜಕೀಯರಾಜ್ಯಸುದ್ದಿ

ಈಶ್ವರಪ್ಪನವರ ಅಸಮಾಧಾನ ವರಿಷ್ಠರು ನಿವಾರಿಸ್ತಾರೆ : ಶೆಟ್ಟರ್

ಹುಬ್ಬಳ್ಳಿ : ಕೆ.ಎಸ್ ಈಶ್ವರಪ್ಪ ಅವರ ಅಸಮಾಧಾನವನ್ನು ಸರಿಪಡಿಸುವ ಕೆಲಸ ಆಗಿಯೇ ಆಗುತ್ತೆ.ಪಕ್ಷದ ವರಿಷ್ಠರು ಇದರ ಬಗ್ಗೆ ಗಮನ ಹರಿಸುತ್ತಾರೆ ಎಂದು ಮಾಜಿ ಸಿಎಂ. ಹಾಗೂ ಹಿರಿಯ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ ಅವರು, ಕೆ ಎಸ್ ಈಶ್ವರಪ್ಪನವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಆದರೆ ಇದನ್ನು ಸರಿಪಡಿಸುವ ಕೆಲಸವಾಗುತ್ತದೆ. ಇನ್ನೂ ಚುನಾವಣೆ ಘೋಷಣೆ ಆಗಬೇಕಿದೆ. ಈಗ ಪಕ್ಷಗಳು ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಾರೆ ಅಷ್ಟೇ ಎಂದರು.

ಈಶ್ವರಪ್ಪನವರ ಅಸಮಾಧಾನ ನಿವಾರಿಸುವ ಕೆಲಸ ವರಿಷ್ಠರು ಮಾಡುತ್ತಾರೆ. ಈಗ ಚುನಾವಣೆ ಘೋಷಣೆ ಆಗಬೇಕು. ಬಳಿಕ ನಾಮಪತ್ರ‌ ಸಲ್ಲಿಕೆ ನಡೆಯುತ್ತದೆ, ಅಷ್ಟರಲ್ಲಿ ವರಿಷ್ಠರು ಸಮಸ್ಯೆ ಸರಿ ಮಾಡುತ್ತಾರೆಂಬ ನಂಬಿಕೆ ಇದೆ ಎಂದರು. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ಬರುವ ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ ಎಂಬ ವಿಶ್ವಾಸವನ್ನು ಶೆಟ್ಟರ್ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button