ರಾಜ್ಯ

ಆಟೋ ಚಾಲಕರೇ ಹುಷಾರ್.. ಹೆಚ್ಚು ಹಣ ಕೇಳಿದ್ರೆ ಪರ್ಮಿಟ್ ಕ್ಯಾನ್ಸಲ್..!

ಆಟೋಚಾಲಕರು ಸಿಕ್ಕಾಪಟ್ಟೆ ರೇಟ್ ಹೇಳ್ತಾರೆ.. ಒನ್ ಟು ಡಬಲ್ ಕೀಳ್ತಾರೆ ಅನ್ನೋ ಆರೋಪ ಇದೆ.. ಗೊತ್ತಿಲ್ಲದವರಾದ್ರೆ ಸುಲಿಗೆಯನ್ನೇ ಮಾಡಿಬಿಡ್ತಾರೆ ಅನ್ನೋ ಆಕ್ರೋಶ ಕೂಡ ಇದೆ.. ಇದರ ಜೊತೆಗೆ ಹಲವು ಭಾರಿ ಕಿರಿಕ್ ಕೂಡ ಮಾಡ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಈಗ ಇಂಥಾ ಆಟೋ ಚಾಲಕರಿಗೆ ಸರ್ಕಾರ ಮೂಗುದಾರ ಹಾಕುತ್ತಿದೆ. ದುಪ್ಪಟ್ಟು ಹಣ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಪ್ರಯಾಣಿಕರ ಬಳಿ ನಿಗದಿಗಿಂತಲೂ ಹೆಚ್ಚು ದರ ವಸೂಲಿ ಮಾಡಿದ್ರೆ, ಕ್ರಮ ಕೈಗೊಳ್ಳಿ ಅಲ್ಲದೇ ಅಂತಹ ಚಾಲಕರ ಪರ್ಮಿಟ್ ರದ್ದು ಮಾಡಬೇಕು. ಜೊತೆಗೆ ಕೇಸ್ ಕೂಡ ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button