ಕ್ರೈಂ ಸ್ಟೋರಿ

ಕನ್ನಡಿಗರ ಮೇಲೆ ರೌಡಿಸಂ : ಸುಳ್ಳು ಹೇಳಿ ಸಿಕ್ಕಿ ಬಿದ್ದ ರೌಡಿ ಸೇನಾಧಿಕಾರಿ..!

ಬೆಂಗಳೂರು : ಕನ್ನಡಿಗನ ಮೇಲೆ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಅಂತ ಕಥೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಹಾಗೂ ನೌಟಂಕಿ ಮುಖ ಬಟಾ ಬಯಲಾಗಿದೆ. ಶಿಲಾದಿತ್ಯ ಬೋಸ್ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡ್ತಿರುವ ಸಿಸಿಟಿವಿ ದೃಶ್ಯ ಹೊರಬೀಳುತ್ತಿದ್ದಂತೆ ಕನ್ನಡಿಗರು ಸಿಡಿದೆದ್ದಿದ್ದಾರೆ.

ವಿಂಗ್​ ಕಮಾಂಡರ್​​ ಶಿಲಾದಿತ್ಯ ಬೋಸ್ ಹಾಗೂ ಆತನ ಸತ್ಯವಂತ ಹೆಂಡ್ತಿ ಹೇಳಿದ್ದನ್ನ ನಿಜ ಅಂತಾ ನಂಬಿದ ಪೊಲೀಸರು, ಕನ್ನಡದ ಯುವಕನ ಮೇಲೆ ಕೇಸ್​ ದಾಖಲಿಸಿದ್ರು. ಆ ಯುವಕನ್ನ ಬಂಧಿಸಿದ್ರು. ಈಗ ಹಿಂದಿ ಆಫೀಸರ್​ ಮಾಡಿರೋ ಸುಳ್ಳಿನ ನಾಟಕ ಸಿಸಿಟಿವಿಯಲ್ಲಿ ಬಯಲಾಗಿದೆ.

ಸಂಜೆ ಹೊತ್ತಿಗೆ ಸಿಸಿಟಿವಿ ಫೊಟೇಜ್ ವಿಂಗ್​​​ ಕಮಾಂಡರ್​ನ ಮುಖವಾಡ ಕಳಚಿದೆ.ಕಾನೂನು ಎಲ್ಲರಿಗೂ ಒಂದೇ. ಒದೆ ತಿಂದ ಸಾಫ್ಟ್​ವೇರ್‌ ಕಂಪನಿ ಉದ್ಯೋಗಿ ವಿಕಾಸ್ ಬೈಯಪ್ಪನಹಳ್ಳಿ ಪೊಲೀಸ್​ ಸ್ಟೇಷನ್​ನಲ್ಲಿದ್ದಾನೆ. ಹಿಗ್ಗಾಮುಗ್ಗಾ ಥಳಿಸಿದ ಶಿಲಾದಿತ್ಯ ಬೋಸ್​ನ ಶೌರ್ಯ, ಪರಾಕ್ರಮದ ಬೀದಿ ಜಗಳದ ಸಿಸಿಟಿವಿ ದೃಶ್ಯ ನೋಡಿದ ಮೇಲೆ ಪೊಲೀಸರು ಕೇಸ್​ ದಾಖಲಿಸುತ್ತಾರಾ ಅಂತಾ ಕಾದು ನೋಡಬೇಕಿದೆ.

ಬೆಂಗಳೂರಿನಲ್ಲಿ ಕನ್ನಡಿಗರಿಗೆ ಇದೆಂಥ ಸ್ಥಿತಿ ಬಂತು.!ಸಿಎಂ ಸಿದ್ದರಾಮಯ್ಯನವರೇ,ಕನ್ನಡಿಗನಿಗೆ ನ್ಯಾಯ ಕೊಡಿಸಿ ಅಂತ ಬೆಂಗಳೂರಲ್ಲಿ ಅಭಿಯಾನ ಮಾಡ್ಬೇಕಾ..? ಸಿಎಂ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಕನ್ನಡ ಕಾಳಜಿ..? ಗೃಹ ಸಚಿವ ಪರಮೇಶ್ವರ್​ ಅವರೇ ನೀವು ನಮ್ಮ ಸೇವಕರೋ..? ಅಥವಾ.. ಕರ್ನಾಟಕದಲ್ಲಿ ಕನ್ನಡಿಗರ ರಕ್ಷಣೆಗೂ ಅಭಿಯಾನ ಮಾಡ್ಬೇಕಾದ ದುರ್ಗತಿ ಬಂತೇ..? ಸಿಎಂ ಸಿದ್ದರಾಮಯ್ಯನವರೇ ಇದಕ್ಕಿಂತ ಅಸಹ್ಯ, ಗಲೀಜು ಮತ್ತೊಂದಿಲ್ಲ..! ಎಲ್ಲಿದ್ದಾರೆ ಎಲೆಕ್ಷನ್​ ಟೈಂನಲ್ಲಿ ಕನ್ನಡ ಆಸ್ಮಿತೆ ಬಗ್ಗೆ ಮಾತನಾಡಿದ್ದ ಶೂರರು, ವೀರರು..? ಎಲೆಕ್ಷನ್​ ಬಳಿಕ, ಅಧಿಕಾರ ಸಿಕ್ಕ ಬಳಿಕ ಕನ್ನಡ, ಕರ್ನಾಟಕ ಮರೆತರೇ ಆ ಶೂರರು, ವೀರರು..?

 

 

Comments (0)

Your email address will not be published. Required fields are marked *

Back to top button