ಗದಗ: ಪ್ರೀತಿಸಿ ಮದುವೆಯಾದ ಯುವತಿ, ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರು ಆರೋಪ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಬೆಟಗೇರಿ ಸೆಟ್ಮೆಂಟ್ ಏರಿಯಾದ ವಿಶಾಲಕುಮಾರ್ ವಿಚಿತ್ರ ಲವ್ ಜಿಹಾದ್ ಆರೋಪ ಮಾಡಿದ್ದಾನೆ. ತಹಸೀನಾ ಕುಟುಂಬದ ವಿರುದ್ಧ ಬಲವಂತವಾಗಿ ಮತಾಂತರ ಮಾಡಿರುವ ಆರೋಪ ಮಾಡಿದ್ದಾನೆ. ಮುಸ್ಲಿಂ ಸಂಪ್ರದಾಯ ಫಾಲೋ ಮಾಡದಿದ್ದಕ್ಕೆ ವಿಶಾಲ್ಗೆ ಡಿವೋರ್ಸ್ ನೀಡಲು ತಹಸೀನಾ ಮುಂದಾಗಿದ್ದಾಳೆ ಎಂದು ಆರೋಪ ಮಾಡಿದ್ದಾನೆ.
ಅಂದ ಹಾಗೆ ವಿಶಾಲ್ ಮತ್ತು ತಹಸೀನಾ ಕಳೆದ ಮೂವರು ವರ್ಷಗಳಿಂದ ಪ್ರೀತಿಸುತ್ತಿದ್ದು, 2024ರ ನವೆಂಬರ್ 24 ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಬಳಿಕ ವಿಷಯ ತಿಳಿದ ಯುವತಿ ಮನೆಯವರು ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ಗೆ ತಹಸೀನಾ, ಆಕೆಯ ತಾಯಿ ಬೇಗಂ ಬಾನು, ತಹಸೀನಾ ಸೋದರ ಮಾವ ಇಬ್ರಾಹಿಂ ಖಾನ್ ದಾವಲ್ ಸಾಬ್ ಮುಸ್ಲಿಂ ನಿಖಾಗೆ ಒತ್ತಾಯ ಮಾಡಿದ್ರು.. ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್ 2025ರ ಏಪ್ರಿಲ್ 25 ನೇ ತಾರೀಕು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಂಡಿದ್ದ. ಆದ್ರೆ ಆತನಿಗೆ ಅರವಿಲ್ಲದೇ ಆತನ ಹೆಸರನ್ನ ಬದಲಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.
ಬಳಿಕ ತಹಸೀನಾ ಮತ್ತು ತಾಯಿ ಬೇಗಂ ಬಾನು ಜಮಾತ್ ಗೆ ಹೋಗಲು ಒತ್ತಾಯಿಸಿತ್ತಿದ್ದರಂತೆ. ಈ ಮಧ್ಯೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯುವಕನ ಕುಟುಂಬಸ್ಥರು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಜೂನ್ 5ರಂದು ಮದುವೆಗೆ ದಿನಾಂಕ ಸಹ ನಿಗದಿಯಾಗಿತ್ತು.
ಆರಂಭದಲ್ಲಿ ಮದುವೆಗೆ ಒಪ್ಪಿಕೊಂಡಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಮಾತಿಗೆ ಮನಿದು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಪ್ಪಲಿಲ್ಲವಂತೆ. ಅಲ್ಲದೇ ವಿಶಾಲ್ಗೆ ಮುಸ್ಲಿಂ ಧರ್ಮವನ್ನೇ ಫಾಲೋ ಮಾಡಿಕೊಂಡು ಇರುವಂತೆ ಒತ್ತಡ ಹೇರಿದ್ದಾರಂತೆ. ಮುಸ್ಲಿಂ ಮತಾಂತರಕ್ಕೆ ಒಪ್ಪದಿದ್ದಕ್ಕೆ ತಹಸೀನಾ ದೂರವಾಗುವಂತೆ ಕುಟುಂಬ ನೋಡಿಕೊಂಡಿದ್ದಾರೆ ಎಂದು ವಿಶಾಲ್ ಆರೋಪಿಸಿದ್ದಾನೆ.
ಇದೀಗ ಯುವಕನ ಸಹಾಯಕ್ಕೆ ಹಿಂದೂಪರ ಸಂಘಟನೆಗಳು ಸಾಥ್ ನೀಡಿದ್ದು, ಬಲವಂತದ ಮತಾಂತರ ಮಾಡಿ, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.


