#Exclusive News
ಹಿಂದೂ ಯುವಕನೊಂದಿಗೆ ಸಪ್ತಪದಿ ತುಳಿದ ಮುಸ್ಲಿಂ ಯುವತಿ

ಕೋಲಾರ: ಇತ್ತೀಚಿನ ದಿನಗಳಲ್ಲಿ ಲವ್‌ಮ್ಯಾರೇಜ್ ಸರ್ವೇಸಾಮಾನ್ಯವಾಗಿದೆ. ಆದರೆ ವಯಸ್ಸಿಗೆ ಬಂದ ಯುವಕ ಯುವತಿಯರು ಲವ್ ಮಾಡೋವಾಗ ಏನನ್ನೂ ಯೋಚಿಸದೇ ಪ್ರೀತಿಯಲ್ಲಿ ಸಿಲುಕಿ ಬಿಡ್ತಾರೆ. ಕೊನೆಗೆ ಜಾತಿ, ಧರ್ಮ ಅಂತ ಬಂದಾಗ ಮನೆಯವರಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡ್ತಾರೆ. ಇಲ್ಲವೇ ಹೇಡಿಯಂತೆ ಸಾವಿಗೆ ಶರಣಾಗ್ತಾರೆ.
ಆದರೆ ಜಿಲ್ಲೆಯ ಮಾಲೂರು ತಾಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ಮನೆಯವರ ತೀವ್ರ ವಿರೋಧದ ನಡುವೆ ಹಿಂದೂ (Hindu) ಯುವಕ ಹಾಗೂ ಮುಸ್ಲಿಂ (Muslim) ಯುವತಿ ಪರಸ್ಪರ ಪ್ರೀತಿಸಿ ವಿವಾಹವಾಗಿರುವ ಪ್ರಸಂಗ ನಡೆದಿದೆ.
ಹೌದು, ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮನೆಯವರ ತೀವ್ರ ವಿರೋಧದ ನಡುವೆಯೂ ದಲಿತ ಸಂಘಟನೆಗಳ ಸಹಕಾರದೊಂದಿಗೆ ವಿವಾಹವಾಗಿದ್ದಾರೆ.



