ಕಲಬುರಗಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆ ಕಲಬುರಗಿಯಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಅದೇ ರೀತಿ ಕಲಬುರಗಿಯಲ್ಲಿ ಕಿರುಕುಳ ನೀಡುತ್ತಿದ್ದಾನೆಂದು ರಾಘವೇಂದ್ರ ನಾಯಕ್ (39) ಎಂಬುವವನನ್ನು ಮಾಜಿ ಪ್ರಿಯತಮೆ ಅಶ್ವಿನಿ ಅಲಿಯಾಸ್ ತನು & ಗ್ಯಾಂಗ್ ಕೊಲೆ ಮಾಡಿದೆ. ಅಶ್ವಿನಿ ಸಹಚರರಾದ ಗುರುರಾಜ್, ಲಕ್ಷ್ಮೀಕಾಂತ್ ಮಾರ್ಚ್ 12 ರಂದು ರಾಘವೇಂದ್ರ ನಾಯಕ್ ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ.

ಪ್ರೀತಿಸಿದ್ದಾಕೆ ಅಶ್ವಿನಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಾಜಿ ಲವರ್ಗೆ ಈಗಿನ ಲವರ್ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾನೆ. ಕಲಬುರಗಿಯಿಂದ ರಾಘವೇಂದ್ರನನ್ನು ಅಪಹರಿಸಿ ಕೀರ್ತಿ ನಗರದ ಸ್ಮಶಾನಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ರಾಘವೇಂದ್ರ ನಾಯಕ್ ಮರ್ಮಾಂಗಕ್ಕೆ ಒದ್ದು ವಿಕೃತವಾಗಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಕಾರಿನಲ್ಲಿ ಹಾಕಿಕೊಂಡು ರಾಯಚೂರಿನ ಶಕ್ತಿ ನಗರದ ಬಳಿ ನದಿಗೆ ಬಿಸಾಕಿ ಎಸ್ಕೇಪ್ ಆಗಿದ್ದಾರೆ.
ಇನ್ನು ಈ ಪ್ರಕರಣ ಸಂಬಂಧ ಕಲಬುರಗಿಯಲ್ಲಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಪ್ರತಿಕ್ರಿಯಿಸಿದ್ದು, ಕಿಡ್ನ್ಯಾಪ್ ಕೇಸ್ ತನಿಖೆ ನಡೆಸಿದಾಗ ಕೊಲೆ ಎನ್ನುವುದು ಗೊತ್ತಾಗಿದೆ. ಮಾರ್ಚ್ 12 ರಾಘವೇಂದ್ರ ಕಾಣೆಯಾಗಿದ್ದ. ಈ ಬಗ್ಗೆ ಆತನ ಪತ್ನಿ ದೂರು ನೀಡಿದ್ದಳು. ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ಈ ವೇಳೆ ಮೂವರು ಸೇರಿ ಕೊಲೆ ಮಾಡಿದ್ದು ಗೊತ್ತಾಗಿದೆ ಎಂದ್ರು.. ಇನ್ನು ಘಟನೆ ಸಂಬಂಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ಜನ ಆರೋಪಿಗಳನ್ನ ಬಂಧಿಸಲಾಗಿದೆ ಎಂದ್ರು..


