ವಿಜಯನಗರ: ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವತಿ ರಕ್ಷಣೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ. ಹಂಪಿಗೆ ಪ್ರವಾಸಕ್ಕೆಂದು ಬಂದ ಕುಟುಂಬ ಸದಸ್ಯೆಯೊಬ್ಬಳು ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ಸ್ನಾನಕ್ಕೆಂದು ಹೋದಾಗ ಕಾಲು ಜಾರಿ ನದಿಗೆ ಬೀಳುತ್ತಾಳೆ.
ಅದೃಷ್ಟವಶಾತ್ ಕಾವಲು ಕಾಯುತ್ತಿದ್ದ ಹೋಮ್ ಗಾರ್ಡ್ಸ್ ಯುವತಿ ಬೀಳುವುದನ್ನು ಗಮನಿಸಿದ್ದು, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ನದಿಗೆ ಇಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದ್ರು ಸಹ ಅದನ್ನು ಲೆಕ್ಕಿಸದೇ ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದು ಪ್ರಾಣಕ್ಕೆ ಸಂಕಷ್ಟ ತಂದುಕೊಳ್ಳುತ್ತಿದ್ದಾರೆ.


