ಖ್ಯಾತ ನೀಲಿ ಚಿತ್ರತಾರೆ ಕೈಲಿ ಪೇಜ್ ಅವರು ಕೇವಲ 28 ವರ್ಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈ ದುರ್ಘಟನೆ ನಡೆದಿದೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಈಗಾಗಲೇ ಮೃತಪಟ್ಟಿರೋದಾಗಿ ವೈದ್ಯರು ದೃಢೀಕರಿಸಿದ್ದಾರೆ. ಕೈಲಿ ಪೇಜ್ ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕೈಲಿ ಪೇಜ್ ಅವರ ನಿಧನದಿಂದ ಅವರ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖಿತರಾಗಿದ್ದಾರೆ. ಕೈಲಿ ಪೇಜ್ ಅಂತ್ಯಕ್ರಿಯೆಗೂ ಅವರ ಕುಟುಂಬದ ಬಳಿ ದುಡ್ಡಿಲ್ಲ. ಹೀಗಾಗಿ ಮಗಳ ಅಂತ್ಯ ಸಂಸ್ಕಾರಕ್ಕೆ ಹಣ ಸಹಾಯ ಮಾಡಿ ಅಂತ ಬೇಡಿಕೊಳ್ತಿದ್ದಾರೆ. ಖ್ಯಾತ ನೀಲಿ ಚಿತ್ರತಾರೆ ಆಗಿದ್ರೂ ಆಕೆ ಹಣವನ್ನೇ ಸಂಪಾದಿಸಿರಲಿಲ್ವಾ ಅನ್ನೋ ಪ್ರಶ್ನೆ ಉದ್ಭವಿಸಿದೆ.


