RCB ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ತಂಡದ ಮೊದಲ ಮಾಲೀಕ ವಿಜಯ್ ಮಲ್ಯ ನೀಡಿರುವ ಮೊದಲ ಪ್ರತಿಕ್ರಿಯೆ ಸಖತ್ ವೈರಲ್ ಆಗಿದೆ.
ವಿಜಯ್ ಮಲ್ಯಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ವಿರಾಟ್ ಕೊಹ್ಲಿಯನ್ನು ತುಂಬಾ ಹೊಗಳಿದ್ದಾರೆ.
ನಾನು RCB ತಂಡವನ್ನು ರಚಿಸಿದ ದಿನದಿಂದ ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬರಬೇಕು ಎಂಬುದು ನನ್ನ ಕನಸಾಗಿತ್ತು. ಈಗ ನನಸಾಗಿದೆ.. ನನ್ನ ಕನಸನ್ನು ನನಸು ಮಾಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು..
ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ನಾನು ಸೇರಿಸಿಕೊಂಡ ವಿರಾಟ್ ಕೊಹ್ಲಿ ಅವರು 18 ವರ್ಷಗಳ ಕಾಲ ಆರ್‍ಸಿಬಿಯೊಂದಿಗೆ ಸಂಬಂಧ ಹೊಂದಿದ್ದಾರೆ . ಇದು ಬಹಳ ವಿಶೇಷವಾದ ವಿಷಯ ಎಂದು ವಿಜಯ್ ಮಲ್ಯಾ ಬರೆದುಕೊಂಡಿದ್ದಾರೆ.
ಅಂತಿಮವಾಗಿ RCB ಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಈ ಕನಸನ್ನು ನನಸಾಗಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ.
ಪ್ರತಿ ಸಲವೂ ಈ ಬಾರಿ ಕಪ್ ನಮ್ದೇ ಅಂತಿದ್ದ RCB ಅಭಿಮಾನಿಗಳು ಈ ಗೆಲುವಿಗೆ ಅರ್ಹರು. ಈ ಬಾರಿ ಕಪ್ ಬೆಂಗಳೂರಿಗೆ ಬಂದಿದೆ ಎಂದು ವಿಜಯ್ ಮಲ್ಯಾ ಭಾವಾನಾತ್ಮಕವಾಗಿ ಬರೆದುಕೊಂಡಿದ್ದಾರೆ
ವಿಜಯ್ ಮಲ್ಯಾ ಮಾಲಿಕರಾಗಿದ್ದಾಗ RCB ಮೂರು ಬಾರಿ ಫೈನಲ್‍ನಲ್ಲಿ ಸೋತಿತು. ಆರ್‍ಸಿಬಿಯ ಈ ಸೋಲುಗಳು ಸಾಕಷ್ಟು ನೋವಿನಿಂದ ಕೂಡಿದ್ದವು


