ಜಿಲ್ಲೆ

ಕಬ್ಬು ತುಂಬಿದ ಟ್ರ್ಯಾಕ್ಟರಗೆ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು

ಕಬ್ಬು ತುಂಬಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗಿಡಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ನಡೆದಿದೆ.

ಗೋಕಾಕನಗರದ ಲೋಳಸೂರ ಸೇತುವೆ ಹತ್ತಿರ ಕಬ್ಬು ತುಂಬಿಕೊಂಡು ಬಾಗೆವಾಡಿ ಸಕ್ಕರೆ ಕಾರ್ಖಾನೆಗೆ ತೆರಳುತಿದ್ದ ಟ್ರ್ಯಾಕ್ಟರಗೆ ಗೋಕಾಕ ಪಟಗುಂದಿ ಹನುಮಾನ ದೇವಸ್ಥಾನದಿಂದ ಕಚ್ಚಾ ದಾರಿ ಮುಖಾಂತರ ಮುಖ್ಯ ರಸ್ತೆಗೆ ಸೇರುವ ಕಚ್ಚಾ ದಾರಿಯಲ್ಲಿ ವೇಗವಾಗಿ ಬಂದು ಮುಖ್ಯ ರಸ್ತೆ ಸೇರುವ ಭರದಲ್ಲಿ ತಿರುವು ಪಡೆಯುತ್ತಿರುವಾಗ ನಿಯಂತ್ರಣ ತಪ್ಪಿದ ಬೈಕ್ ಸವಾರರು ಟ್ರ್ಯಾಕ್ಟರಗೆ ಸಿಕ್ಕಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಮೃತರು ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ದುಂಡಪ್ಪಾ ಹಡಗಿನಾಳ ( 45),
ಸತ್ತೆಪ್ಪಾ ರಾಮಪ್ಪ ಚಿಂಚಲಿ( 50) ಎಂದು ತಿಳಿದು ಬಂದಿದೆ.ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button