ಮಣಿವಣ್ಣನ್ ರಾಜ್ಯ ಕಂಡ ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ. ಇದೀಗ ಅವರನ್ನ ಒಂದರ ಹಿಂದೆ ಒಂದರಂತೆ ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯದಲ್ಲಿರುವ ಬೆರಳಿಕೆಯಷ್ಟು ಸ್ವಚ್ಚ ಅಧಿಕಾರಿಗಳ ಪಟ್ಟಿಯಲ್ಲಿ ಇವರು ಒಬ್ಬರು.. ಇಂತಹ ಪ್ರಾಮಾಣಿಕ ಅಧಿಕಾರಿ ಮೇಲೆ ಇದೀಗ ಆರೋಪಗಳ ಸುರಿಮಳೆ ಆಗುತ್ತಿದೆ. ಅವರನ್ನ ವಿವಾದಗಳಲ್ಲಿ ಸಿಲುಕಿಸೋ ಯತ್ನ ನಡೆಯುತ್ತಿದೆ.
ಮಣಿವಣ್ಣನ್ ಅನೇಕ ಭಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಇನ್ನು ಜಿಲ್ಲಾಧಿಕಾರಿಯಾಗಿ, ಮತ್ತು ಅನೇಕ ಸರ್ಕಾರಿ ಇಲಾಖೆಗಳ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಮಣಿವಣ್ಣನ್, ಇಲಾಖೆಯೊಳಗಿನ ಹೆಗ್ಗಣಗಳನ್ನ ಹೊರ ಹಾಕಿ ದಕ್ಷತೆ ತೋರಿದ್ರು. ಅಂತಹ ಹೆಗ್ಗಣಗಳು ಇವತ್ತು ಇವರನ್ನ ಟಾರ್ಗೆಟ್ ಮಾಡಿ ಮಸಿ ಬಳಿಯುವ ಕೆಲಸ ಮಾಡುತ್ತಿವೆಯಾ ಎಂಬ ಸಂಶಯ ಕೂಡ ಉದ್ಭವವಾಗಿದೆ.
ಇದೀಗ ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಮಣಿವಣ್ಣನ್, ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಗಳನ್ನ ಮಾಡಿದ್ರು. ಆದ್ರೆ, ಇವರಿದ್ದಷ್ಟು ದಿನ ತಿನ್ನುವವರ ಆಟ ನಡೆಯೋದಿಲ್ಲ..ಇದು ಭ್ರಷ್ಟ ಅಧಿಕಾರಿಗಳಿಗೆ, ಭ್ರಷ್ಟರಾಜಕಾರಣಿಗಳಿಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿಯೇ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕುವೆಂಪು ಸಾಲುಗಳ ವಿವಾದ ಸೃಷ್ಟಿಸಿ ಅದನ್ನ ಮಣಿವಣ್ಣನ್ ತಲೆಗೆ ಕಟ್ಟುವ ಕಿಡಿಗೇಡಿ ಕೃತ್ಯವೂ ನಡೆಯಿತು. ಆದ್ರೆ ಅಸಲಿಗೆ ಈ ವಿವಾದಿತ ಆದೇಶಕ್ಕಾಗಲಿ, ಕಡತಕ್ಕಾಗಲಿ ಮಣಿವಣ್ಣನ್ ಸಹಿ ಹಾಕಿರಲಿಲ್ಲ. ಈ ಬಗ್ಗೆ ಸ್ವತಃ ಮಣಿವಣ್ಣನ್ ಸ್ಪಷ್ಟನೆ ಕೊಟ್ಟು ವಿವಾದಕ್ಕೆ ತೆರೆ ಬಿದ್ದಿದೆ.
ಇದೀಗ ಅವರ ವಿರುದ್ಧ ಮತ್ತಷ್ಟು ಕಿಡಿಗೇಡಿಗಳು, ಆಕ್ಟೀವ್ ಆಗಿದ್ದಾರೆ. ಸುಖಸುಮ್ಮನೆ ಪ್ರಕರಣಗಳಲ್ಲಿ ಸಿಲುಕಿಸಿ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಒಬ್ಬ ನಿಷ್ಟಾವಂತ ಅಧಿಕಾರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಸತ್ಯಕ್ಕೆ ಸಾವಿಲ್ಲ. ಮಣಿವಣ್ಣನ್ ತಪಿತಸ್ಥರಲ್ಲ ಅನ್ನೋದು ಅನೇಕರ ಭಾವನೆ. ಅದು ಸತ್ಯ ಕೂಡ.