Editorial
- Editorial

ಸಂಪಾದಕೀಯ…
ನಾನೂ ಗೆಲ್ಲಬೇಕು. ಸೆಲೆಬ್ರಿಟಿಯಾಗಬೇಕು. ಸಕ್ಸಸ್ ಕಾಣಬೇಕು. ನನ್ನ ಕಂಡರೆ ಜನ ಸೆಲ್ಫಿ ತಗೋಬೇಕು…. ಇದು ಎಲ್ಲರ ಕನಸು. ಆದರೆ, ಸಕ್ಸಸ್ ಸುಮ್ಮನೆ ಸಿಗಬೇಕಲ್ಲ. ಸಕ್ಸಸ್ ಗೆ ಎಲ್ಲಿರುತ್ತೆ ಹೇಳಿ ಶಾರ್ಟ್ ಕಟ್. ಅದಕ್ಕಾಗಿ ಬೆವರು, ರಕ್ತ ಬಸಿಯಬೇಕು. ಏಕಾಂತದಲ್ಲಿ ಕಣ್ಣೀರುಗರೆಯಬೇಕು. ಕಠಿಣಾತಿಕಠಿಣ ತೀರ್ಮಾನ ಮಾಡಬೇಕು. ಭಯ ಹತಾಷೆ, ದುಃಖದ ಮಡಿಲಲ್ಲಿ ಈಜಬೇಕು. ಮುಗಿದೇ ಹೋಯಿತು ಅನ್ನೋ ಶೂನ್ಯ ದಾಟಿ ಸೋಲದೆ ಮುಂದುವರಿಲೇಬೇಕು. ಈ ಕಠಿಣ ಹಾದಿ ಎಲ್ಲರಿಗೂ ದಕ್ಕಲ್ಲ. ಗೆಲುವು ಎಂಬುದು ಸಾವು ಬದುಕಿನ ಮಾನಸಿಕ ಹೋರಾಟ. ಇಂಥದ್ದೇ ಹಾದಿ ಕ್ರಮಿಸಿ ಗೆಲವು ಕಂಡವರು ನಮ್ಮ ಸ್ಯಾಂಡಲ್ ವುಡ್ ನ ನಟರಾದ ಯಶ್ ಮತ್ತು ನಟಿ ರಶ್ಮಿಕಾ. ಎಲ್ಲೋ ಇದ್ದ ಯಶ್ ಆಗಸಕ್ಕೆ ಬೆಳೆದುಬಿಟ್ಟರು ಕಾಲೆಳೆವ ಜನ ತಲೆಯೆತ್ತಿ ನೋಡುವಂತೆ. ಯಾರೂ ಇಗ್ನೋರ್ ಮಾಡಲು ಸಾಧ್ಯವೇ ಇಲ್ಲದಂತೆ. ಒಂದು ಚಾನ್ಸ್ ಗಾಗಿ ಆಸೆಗಣ್ಣಿಂದ ಕಾಯುತ್ತಿದ್ದ ಬಾಲಕಿ ರಶ್ಮಿಕಾ ಇಂದು ಮುಗಿಲ ಮಲ್ಲಿಗೆ. ಸಣ್ಣ ಚಾನ್ಸ್ ಗಾಗಿ ರಕ್ಷಿತ್ ಶೆಟ್ಟಿ ಸಿಕ್ಕರೆ ಸಾಕೆಂದುಕೊಂಡಿದ್ದ ರಶ್ಮಿಕಾ ಧಿಡೀರ್ ಪ್ಯಾನ್ ಇಂಡಿಯಾ ನಟಿಯಾಗಿಬಿಟ್ಟರು. ಅದು ಆಕೆಯ ರಿಸ್ಕ್, ಆಕೆಯ ಎಫರ್ಟ್. ಎಷ್ಟು ಬೆಳೆದರೇನಂತೆ ಈ ಇಬ್ಬರು ನತದೃಷ್ಟರಿಗೆ ನೆಮ್ಮದಿ ಕೊಂಚ ದೂರವೇ ಉಳಿದುಬಿಟ್ಟಿದೆ. ಗೆಲುವಿನ ಸವಿಯ ಹೊತ್ತಲ್ಲೇ ಇವರ ಮೂಲದ ಶಾಪ ಇವರನು ಕಾಡಿ ನಕ್ಕ ಮರುಕ್ಷಣವೇ ಖೇದಕ್ಕೆ ದೂಡುತ್ತಿದೆ.ಯಾವ ಮೂಲವು ಇವರ ಗೆಲುವಿಗೆ ನೀರು ಎರೆದಿದೆಯೋ ಅದೇ ಮೂಲ ಈ ಸಾಧಕರಿಗೆ ಆಗಾಗ ಚುಚ್ಚಿ ನೋಯಿಸುತ್ತಿದೆ. ತನ್ನ ಊರ ಕೆರೆಗೆ ನಾಲ್ಕು ಕೋಟಿ ದೇಣಿಗೆ ಕೊಡುವ ಯಶ್ ಪಾಲಿಗೆ ಆತನ ತಾಯಿ ಮಾಡುವ ಒಂದು ಚೀಟಿ ವ್ಯವಹಾರ ದುಬಾರಿಯಾಗ್ತಿದೆ.ಆಕೆ ಬೀದಿಗೆ ನಿಂತು ಸೆಡ್ಡು ಹೊಡೆವ ಕಾಂಪೌಂಡ್ ಕಿರಿಕ್ ಯಶ್ ಅವರ ಕಣ್ಣಲ್ಲಿ ಮತ್ತೆ ಬಾಲ್ಯದ ಅವಮಾನದ ಕಣ್ಣೀರನ್ನು ತರಿಸುತ್ತದೆ. ತನ್ನ ಹಡೆದವ್ವಳ ಹಠದ ಎದುರು ಆತನದ್ದು ನಿಸ್ಸಹಾಯಕ ಸ್ಥಿತಿ, ಕಡುಭ್ರಷ್ಟ ಅಧಿಕಾರಿ ಎದುರು ನಿಂತ ಬಡ ರೈತನಂತೆ. ತನ್ನ ನಟನೆಯಿಂದ ಸಹೃದಯರ ಕಣ್ಣು ತೇವಗೊಳಿಸುವ, ದುಃಖಿತ ಮನಗಳಿಗೆ ಪ್ರೀತಿಯ ಸಿಂಚನ ಕೊಡುವ ರಶ್ಮಿಕಾ ಅವರ ಖಾಸಗಿ ಸ್ಥಿತಿಯೂ …
KANNADA NEWS
- ಜಿಲ್ಲೆ

ಮಂಜೇಶ್ವರದಲ್ಲಿ ರಾಜಕೀಯ ಸಂಚಲನ: ಮುಸ್ಲಿಂ ಲೀಗ್ಗೆ ಬಂಡಾಯದ ಬಿಸಿ! ‘ಜನಕೀಯ ಮುನ್ನಡೆ’ಯಿಂದ ಅಖಾಡಕ್ಕೆ ಸ್ವತಂತ್ರ ಅಭ್ಯರ್ಥಿ?
ಕಾಸರಗೋಡು: ಲೆಕ್ಕಾಚಾರಗಳು ತಲೆಕೆಳಗಾಗುವ ಲಕ್ಷಣಗಳು ಕಾಣಿಸುತ್ತಿವೆ. ಯುಡಿಎಫ್ (UDF) ಕೋಟೆಯಲ್ಲಿ ಬಿರುಕು ಮೂಡಿಸಲು ಸಜ್ಜಾಗಿರುವ ‘ಜನಕೀಯ ಮುನ್ನಾ’ (ಜನಕೀಯ ಫ್ರಂಟ್), ಮುಸ್ಲಿಂ ಲೀಗ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್…
Read More » -

-

-












































