Editorial
- Editorial

ಸಂಪಾದಕೀಯ…
ಪ್ರಿಯ ಓದುಗರಿಗೆ ನಮಸ್ಕಾರ. ಅಮೆರಿಕ ಅಧ್ಯಕ್ಷ ಟ್ರಂಪ್, ಇರಾನ್ ಅಧ್ಯಕ್ಷ ನೆತನ್ಯಾಹುಗಳೆಂಬ ಮುದಿಗೊಡ್ಡುಗಳ ಅಯೋಗ್ಯ ಕೃತ್ಯ ದಿಂದ ಜಗತ್ತೇ ಬೆಲೆ ತೆರುತ್ತಿದೆ. ಇವತ್ತು ರಾಜ್ಯದಲ್ಲಿ ಎಲ್ ಪಿಜಿ ಅಭಾವ ಶುರುವಾಗಿದೆ. ಕೊಲ್ಲಿ ರಾಷ್ಟ್ರಗಳ ಮೇಲೆ ಈ ದುಷ್ಟರು ನಡೆಸ್ತಿರೋ ದೌರ್ಜನ್ಯದಿಂದ ಜನರಷ್ಟೇ ಅಲ್ಲ ಜೀವಜಂತುಗಳಿಗೂ ಭಾರಿ ಸಾವು ನೋವು ಕಾಡುತ್ತಿದೆ. ತೈಲ ಬೆಲೆ ಹೆಚ್ಚುತ್ತದೆ ಎಲ್ಲ ನಿತ್ಯ ಉಪಯೋಗಿ ವಸ್ತುಗಳ ಬೆಲೆ ಏರುತ್ತದೆ. ಮಾರುಕಟ್ಟೆ ಬೀಳುತ್ತದೆ. ಆರ್ಥಿಕತೆ ಕುಸಿದು ಜನಸಾಮಾನ್ಯ ಕಂಗಲಾಗುತ್ತಾನೆ. ಆದರೆ ಎಲ್ಲವನ್ನೂ ಅನುಭವಿಸಿ ಪರಲೋಕಕ್ಕೆ ಹೊರಟಿರುವ ಈ ಅಯೋಗ್ಯರು ಜಗತ್ತಿನ ನೆಮ್ಮದಿ ಕೆಡಿಸಿ ಯಾರೂ ಸುಖವಾಗಿ ಇರದಂತೆ ಮಾಡುತ್ತಿದ್ದಾರೆ. ಬೇರೆ ದೇಶಗಳ ನಾಯಕರನ್ನು ಅಪಹರಿಸುತ್ತಿದ್ದಾರೆ. ಕೊಲ್ಲುತ್ತಿದ್ದಾರೆ. ಪ್ರಜಾತಂತ್ರದ ದೊಡ್ಡಣ್ಣ ಎಂಬ ಹೆಸರಿಟ್ಟುಕೊಂಡ ಅಮೆರಿಕ ಟ್ರಂಪ್ ನಿಂದಾಗಿ ಮಾನ ಕಳೆದುಕೊಳ್ತಿದೆ. ಮಾರ್ಟಿನ ಲೂಥರ್ ಕಿಂಗ್, ಅಬ್ರಹಾಂ ಲಿಂಕನ್ ರಂಥ ಉದಾತ್ತ ನಾಯಕರನ್ನು ಕೊಂದ ಅಮೆರಿಕನ ಮನಸ್ತಿತಿಯ ಟ್ರಂಪ್ ಎಂಬ ಗಾಂಪಮಾಡ್ತಿರೋ ಹಲಾಲುಕೋರ ಕೆಲಸಗಳನ್ನು ಜಗತ್ತಿನ ನಾಯಕರು ಖಂಡಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈತ ಎಲ್ಲ ನಾಯಕರಲ್ಲಿ ಭಯ ಹುಟ್ಟಿಸಿಬಿಟ್ಟಿದ್ದಾನೆ. ತನ್ನ ದೇಶವನ್ನು ಸೇಫಾಗಿಟ್ಟುಕೊಂಡಿರುವ ಈ ಅಯೋಗ್ಯ ಉಳಿದ ದೇಶಗಳ ನೆಮ್ಮದಿ ಕೆಡಿಸಿದ್ದಾನೆ. ವಾನಪ್ರಸ್ತಕ್ಕೆ ಹೋಗಬೇಕಾದ ಇಂಥ ವೃದ್ಧರು ಯುವಜನರ ಮೇಲೆ ಯುದ್ಧಘೋಷಿಸಿದಂತೆ ಕಾಣ್ತಿದೆ. ಜಗತ್ತಿನ ಎಲ್ಲ ಜನ ಒಂದಾಗಿ ಇಂಥ ಯುದ್ಧಪೀಪಾಸು ಜನದ್ರೋಹಿಗಳನ್ನು ಹಮ್ಮೆಟ್ಟಿಸಬೇಕಿದೆ. ಇಂಥಹವರ ಸಂತತಿ ರಾಜಕಾರಣದಲ್ಲಿ ಇರದಂತೆ ನೋಡಿಕೊಳ್ಳಬೇಕಿದೆ. ಯುದ್ಧ ನಿಲ್ಲದೆ ಹೋದರೆ ಎಲ್ಲ ರಾಷ್ಟ್ರಗಳಲ್ಲಿ ಬೆಲೆ ಏರುತ್ತದೆ. ನಿರುದ್ಯೋಗ ಹೆಚಚುತ್ತದೆ. ನಮ್ಮ ಬೆಳೆಗಳಿಗೆ ಮಾರ್ಕೆಟ್ ಇಲ್ಲವಾಗುತ್ತದೆ. ಆಹಾರ ಅಭದ್ರತೆ ಹೆಚ್ಚಿ ಊಟಕ್ಕೆ ಗತಿಯಿಲ್ಲದ ಸ್ಥಿತಿ ಬಡವರದ್ದಾಗುತ್ತೆ, ಜನರ ದೈಹಿಕ ಮಾನಸಿಕ ಆರೋಗ್ಯ ಹದಗೆಡುತ್ತದೆ. ಮಣ್ಣು-ನೀರು ಮಾಲಿನ್ಯ, ಅರಣ್ಯ ನಾಶ. ದೀರ್ಘಕಾಲದಲ್ಲಿ ಹವಾಮಾನ ಬದಲಾವಣೆ ತೀವ್ರಗೊಳ್ಳುತ್ತದೆ. ಈ ಅಯೋಗ್ಯರೇನೋ ಎಲ್ಲವನ್ನೂ ಎಂಜಾಯ್ ಮಾಡಿ ಸತ್ತುಹೋಗುತ್ತಾನೆ . ಭವಿಷ್ಯದಪೀಳಿಗೆಯೆ ನೆಮ್ಮದಿಗೆ ಕೊಳ್ಳಿ ಮಿಎಉವ ಅಧಹಿಕಾರವನ್ನು ಈ ಅಯೋಗ್ಯರಿಗೆ ಕೊಟ್ಟವರು ಯಾರು. ?ಯುದ್ಧದಿಂದ ಯಾರಿಗೂ ಗೆಲುವಿಲ್ಲ – ಕೇವಲ ಸಾವು, ದುಃಖ, ನಾಶ ಮತ್ತು ದೀರ್ಘಕಾಲೀನ ನೋವು! ಇರಾನ್ ಯುದ್ಧದಂತಹ ಸಂಘರ್ಷಗಳು ಇಡೀ …
KANNADA NEWS
- ದೇಶ/ವಿದೇಶ

13 ವರ್ಷಗಳ ಕೋಮಾ ಅಂತ್ಯ! ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್ ಐತಿಹಾಸಿಕ ಅನುಮತಿ!
ನವದೆಹಲಿ: ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾವನ್ನಪ್ಪಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 2013ರಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ…
Read More » -

-

-












































