ಚಿತ್ರದುರ್ಗ : ಬೆಸ್ತರ ಸಮುದಾಯಕ್ಕೆ ಸರ್ಕಾರದಿಂದ ಎಕರೆಗಳಷ್ಟು ಜಾಗವನ್ನು ಮಂಜೂರು ಮಾಡಿಸುತ್ತೇವೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ ನೆಡೆದ ಗಂಗಾಂಬಿಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾಡಿದರು.
ನೀವು ಭೂಮಿಯನ್ನು ಗುರುತಿಸಿಕೊಂಡು ಬಂದರೆ ನಾವು ಸರ್ಕಾರದಿಂದ ಕೊಡಿಸಲಾಗುತ್ತದೆ. ಹಿಂದೆಯೂ ನಾವು ಸಮಾಜಕ್ಕೆ ಹಲವು ಸೌಲಭ್ಯಗಳನ್ನು ಕೊಡಿಸುದ್ದು, ಮುಂದೆಯೂ ಕೊಡಿಸುತ್ತೇವೆ. ಸಮಾಜವು ಶಿಕ್ಷಣ ಸಂಘಟನೆ ಹೋರಾಟ ಇವುಗಳನ್ನು ಮಾಡಬೇಕು. ಮೊದಲು ಶಿಕ್ಷಣ ಪಡೆಯಬೇಕು. ಅಂಬೇಡ್ಕರ್ ಶಿಕ್ಷಣ ಪಡೆಯಿರಿ ಎಂದು ಎಸ್ಸಿ ಸಮುದಾಯಗಳಿಗೆ ಮಾತ್ರ ಹೇಳಲಿಲ್ಲ , ಸೌಲಭ್ಯ ವಂಚಿತ ಸಮುದಾಯಗಳು ಯಾರೇ ಇದ್ದರು ಅವರು ಶಿಕ್ಷಣ ಪಡೆಯಬೇಕು ಎಂದು ಹೇಳಿದ್ದರೆಂದರು. ಹೋರಾಟ ಮಾಡದೆ ಯಾವ ಬೇಡಿಕೆಗಳು ಈಡೇರುವುದಿಲ್ಲ.
ಯಾವ ಸರ್ಕಾರಗಳು ಗಮನಿಸುವುದಿಲ್ಲ.ಇದರಿಂದ ನೀವು ಸಂಘಟಿತರಾಗಿ ಹೋರಾಟ ಮಾಡಬೇಕಿದೆ.ನಾನು ಸಮಾಜ ಕಲ್ಯಾಣ ಮಂತ್ರಿಯಾದಾಗ ಈ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದ್ದೇನೆ. ಆಗಿನ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಕೂಡ ಸಮಾಜಕ್ಕೆ ಹಲವು ಕೆಲಸಗಳನ್ನು ಮಾಡಿಕೊಟ್ಟಿದ್ದರು. ಈಗಲು ಮಾಡುತ್ತೇವೆ. ಮುಂದೆಯೂ ಮಾಡಲು ತಯಾರಿದ್ದೇವೆ ಎಂದರು.