ಬೆಂಗಳೂರು : ಚಿನ್ನದ ಮಳಿಗೆ ಮೇಲೆ ನಕಲಿ ಬಿಐಎಸ್ ಅಧಿಕಾರಿಗಳ ದಾಳಿ. ಮೂವರು ನಕಲಿ ಬಿಐಎಸ್ ಅಧಿಕಾರಿಗಳನ್ನ ಬಂಧಿಸಿದ ಕೆ ಆರ್ ಪುರ ಪೊಲೀಸರು. ಕೆಆರ್ ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿ ಮೇಲೆ ನಡೆದಿದ್ದ ನಕಲಿ ದಾಳಿ. ಜನವರಿ 27 ರಂದು ನಕಲಿ ದಾಳಿ ಮಾಡಿ ಪರಿಶೀಲನೆ. ನಾಲ್ಕು ಜನ ನಕಲಿ ಅಧಿಕಾರಿಗಳಿಂದ ನಡೆದಿದ್ದ ದಾಳಿ. ದಾಳಿ ಮಾಡಿ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಯತ್ನ. ಇನೋವಾ ಕಾರಿನಲ್ಲಿ ಬಂದಿದ್ದ ನಕಲಿ ಅಧಿಕಾರಿಗಳ ಗ್ಯಾಂಗ್. ನಗರದ ಹಲವು ಜ್ಯುವೆಲರ್ಸ್ ಮೇಲೆ ದಾಳಿ ಆಗಿವೆ. ಅದರಲ್ಲಿ ನಿಮ್ಮದೂ ಒಂದು ಎಂದಿದ್ದ ಗ್ಯಾಂಗ್.
ಅಧಿಕಾರಿಗಳ ಸೋಗಿನಲ್ಲಿ ಹಾಲ್ ಮಾರ್ಕ್ ಇಲ್ಲದ ಅಕ್ರಮ ಚಿನ್ನದ ಪರಿಶೀಲನೆ. ದಾಳಿ ಹೆಸರಲ್ಲಿ ಸುಮಾರು 40 ನಿಮಿಷ ಸರ್ಚ್ ಮಾಡಿದ್ದ ಅಸಾಮಿಗಳು. ಬಳಿಕ ಜ್ಯುವೆಲ್ಲರಿಯಲ್ಲಿದ್ದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಪ್ಲಾನ್. ಚಿನ್ನ ತೆಗೆದುಕೊಂಡು ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ನೋಟಿಸ್. ವಾಪಸ್ ಹೋಗುವ ವೇಳೆ ನಕಲಿ ಅಧಿಕಾರಿಗಳ ಎಡವಟ್ಟು.ಜ್ಯುವೆಲ್ಲರಿ ಸಿಸಿಟಿವಿ ಡಿವಿಆರ್ ತೆಗೆದುಕೊಂಡಿದ್ದ ಅಸಾಮಿಗಳು. ಇದನ್ನ ಕಂಡು ಅನುಮಾನಗೊಂಡ ಸಿಬ್ಬಂದಿ. ನಕಲಿ ಅಧಿಕಾರಿಗಳ ಕಾರು ಪಾಲೋ ಮಾಡಿದ್ದ ಸಿಬ್ಬಂದಿ. ಸಿಬ್ಬಂದಿ ಕಂಡು ಯರ್ರಾಬಿರ್ರಿ ಕಾರು ಚಲಾಯಿಸಿ ಎಸ್ಕೇಪ್ ಆಗಲು ಯತ್ನ.
ಈ ವೇಳೆ ಬೈಕ್ ಗಳ ನಡುವೆ ಸರಣಿ ಅಪಘಾತ. ಅಲ್ಲದೇ ನಕಲಿ ಅಧಿಕಾರಿಗಳ ಬಗ್ಗೆ ಕೂಡಲೇ ಪೊಲೀಸರ ಗಮನಕ್ಕೆ ತಂದ ಸಿಬ್ಬಂದಿ. ಕೂಡಲೇ ಅಲರ್ಟ್ ಆದ ಕೆ ಆರ್ ಪುರ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ. ಮೂರು ಸಬ್ ಇನ್ಸ್‌ಪೆಕ್ಟರ್ ಗಳು ಟಿಸಿ ಪಾಳ್ಯ ಜಂಕ್ಷನ್ ಗೆ ದೌಡು. ಸ್ವಲ್ಪ ದೂರದಲ್ಲೇ ನಕಲಿ ಅಧಿಕಾರಿಗಳ ಎಡೆಮುರಿ ಕಟ್ಟಿದ ಪೊಲೀಸರು. ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್, ಸಂದೀಪ್ ಬಂಧನ. ಈ ಬಗ್ಗೆ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಆರೋಪಿಗಳ ಬಳಿಯಿದ್ದ ಚಿನ್ನ ಜಪ್ತಿ ಮಾಡಿದ ಪೊಲೀಸರು.