ಕ್ರಿಕೆಟ್

RCB ಪಂದ್ಯ ಗೆಲ್ಲಿಸಿ ಕೊಡ್ತಾರೆ ಯಶ್ ದಯಾಳ್…!!

Freedom tv desk : ಈ ಬಾರಿಯು ಐಪಿಎಲ್ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 6 ಆಟಗಾರರನ್ನು ಖರೀದಿಸಿದೆ. ಅದರಂತೆ ಐಪಿಎಲ್ ಸೀಸನ್ -17 ರಲ್ಲಿ ಆರ್​ಸಿಬಿ 25 ಸದಸ್ಯರ ಬಳಗದೊಂದಿಗೆ ಕಾಣಿಸಿಕೊಳ್ಲಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡವನ್ನು ರೂಪಿಸಿದೆ. ಮಿನಿ ಆಕ್ಷನ್​ಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್​ಸಿಬಿ ಹರಾಜಿನ ಮೂಲಕ 6 ಆಟಗಾರರನ್ನು ಖರೀದಿಸಿದೆ.

ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ಆಟಗಾರರಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಅಲ್ಝಾರಿ ಜೋಸೆಫ್ ಹಾಗೂ ದಯಾಳ್, ವೆಸ್ಟ್ ಇಂಡೀಸ್ ವೇಗಿಯನ್ನು ಆರ್​ಸಿಬಿ ಬರೋಬ್ಬರಿ 11.50 ಕೋಟಿ ರೂ.ಗೆ  ಖರೀದಿಸಿದರೆ, ಯಶ್ ದಯಾಳ್ ಅವರ ಆಯ್ಕೆಗಾಗಿ 5 ಕೋಟಿ ರೂ. ವ್ಯಯಿಸಿತ್ತು.

ಇಬ್ಬರು ಬೌಲರ್​ಗಳ ಆಯ್ಕೆ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅಪಸ್ವರಗಳು ಕೇಳಿ ಬಂದವು. ಅದರಲ್ಲೂ ಯಶ್ ದಯಾಳ್​ಗಾಗಿ ಈದು ಕೋಟಿ ಸುರಿದಿರುವ ಆರ್​ಸಿಬಿ ಮ್ಯಾನೇಜ್ಮೆಂಟ್ ನಡೆಯ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಯಶ್ ದಯಾಳ್ ಆರ್​ಸಿಬಿ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಡುವ ವಿಶ್ವಾಸವಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.

ರಾಯಲ್ ಚಾಮೆಂಜರ್ಸ್ ಬೆಂಗಳೂರು ತಂಡದಿಂದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ , ಅನುಜ್ ರಾವತ್, ದಿನೇಶ್ ಕಾರ್ತೀಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್ , ಮಹಿಪಾಲ್ ಲೊಮ್ರೋರ್, ಕಣ್ ಶರ್ಮಾ, ಮನೀಜ್ ಭಾಂಡಗೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೇಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

Comments (0)

Your email address will not be published. Required fields are marked *

Back to top button