ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್, ಗೂಗಲ್, ಸ್ಯಾಮ್‌ಸಂಗ್‌ನಂತಹ ದೊಡ್ಡ ಕಂಪನಿಗಳಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಟ್ರಂಪ್ ಅವರ ಕಂಪನಿಯು ಈಗ ಅಮೆರಿಕದಲ್ಲಿ ಸ್ಮಾರ್ಟ್‌ಫೋನ್ ವ್ಯವಹಾರವನ್ನು ಪ್ರವೇಶಿಸಲಿದೆ. ಈ ಪ್ರೀಮಿಯಂ ಮೊಬೈಲ್ ಫೋನ್ ನೇರವಾಗಿ ಐಫೋನ್ ಮತ್ತು ಗೂಗಲ್ ಪಿಕ್ಸೆಲ್‌ನೊಂದಿಗೆ ಸ್ಪರ್ಧಿಸಲಿದೆ. ಟ್ರಂಪ್ ಅವರ ಕಂಪನಿಯು ಈ ಫೋನ್‌ಗೆ ಟ್ರಂಪ್ ಮೊಬೈಲ್ ಟಿ 1 ಎಂದು ಹೆಸರಿಸಿದೆ, ಇದು ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿದೆ.
ಟ್ರಂಪ್ T1 ನ ವಿಶೇಷವೆಂದರೆ ಈ ಫೋನ್ ಅಮೆರಿಕದಲ್ಲಿ ತಯಾರಿಸಲ್ಪಟ್ಟಿದೆ. ಈ ಫೋನ್ ಅನ್ನು ಡೊನಾಲ್ಡ್ ಟ್ರಂಪ್ ಅವರ ಕುಟುಂಬ ವ್ಯವಹಾರವು ಬಿಡುಗಡೆ ಮಾಡಲಿದೆ. ಈ ಫೋನ್ ಗೂಗಲ್‌ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪೂರ್ವ-ಬುಕಿಂಗ್ ಪ್ರಾರಂಭವಾಗಿದೆ ಮತ್ತು ಇದರ ಬೆಲೆಯನ್ನು 499 ಡಾಲರ್‌ಗಳಲ್ಲಿ ಇರಿಸಲಾಗಿದೆ, ಅಂದರೆ ಸುಮಾರು ಭಾರತದಲ್ಲಿ ಈ ಫೋನಿನ ಬೆಲೆ ಅಂದಾಜು 42,800 ರೂಪಾಯಿಗಳು. ಟ್ರಂಪ್ ಮೊಬೈಲ್‌ನ ಬೆಲೆ ಆಪಲ್‌ನ ಐಫೋನ್ ಮತ್ತು ಗೂಗಲ್ ಪಿಕ್ಸೆಲ್ ಫೋನ್‌ಗಿಂತ ತುಂಬಾ ಕಡಿಮೆಯಾಗಿದೆ.

ಡೊನಾಲ್ಡ್ ಟ್ರಂಪ್ ಕಂಪನಿಯ ಈ ಮೊಬೈಲ್ ಫೋನ್ 6.8 ಇಂಚಿನ AMO LED ಡಿಸ್ಪ್ಲೇಯೊಂದಿಗೆ ಬರಲಿದೆ. ಫೋನ್‌ನ ಡಿಸ್ಪ್ಪೇ 120Hz(ಹರ್ಟ್ಜ್) ಹೈ ರಿಫ್ರೆಶ್ ರೇಟ್ ಹೊಂದಿದೆ.. ಟ್ರಂಪ್ T1 ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ, ಇದರಲ್ಲಿ 50 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾ, 2MP ಡೆಪ್ತ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೇರಿವೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಕ್ಯಾಮೆರಾ ಇದರಲ್ಲಿ ಲಭ್ಯವಿರುತ್ತದೆ.


