Top Newsಮನರಂಜನೆವೈರಲ್ ನ್ಯೂಸ್ಸಿನಿಮಾಸುದ್ದಿ

ರಶ್ಮಿಕಾ ಮಂದಣ್ಣ ಫುಲ್ ಬ್ಲಶಿಂಗ್! ‘ನ್ಯಾಷನಲ್ ಕ್ರಶ್’ನಗುವಿನ ಗುಟ್ಟೇನು?

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಸಂಚಲನ ಮೂಡಿಸಿರುವ ‘ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ’ ಮದುವೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಅವರು ನೀಡಿದ ಒಂದು ಸ್ಟೈಲಿಂಗ್ ರಿಯಾಕ್ಷನ್ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.

ರಶ್ಮಿಕಾ ಮಂದಣ್ಣ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ, ಕ್ಯಾಮೆರಾಮೆನ್ ಗಳು ಅವರನ್ನು ಮದುವೆಯ ಬಗ್ಗೆ ಪ್ರಶ್ನಿಸಿದರು. ವಿಜಯ್ ದೇವರಕೊಂಡ ಅವರ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಕೇಳಿದಾಗ, ರಶ್ಮಿಕಾ ಅವರು ಯಾವುದೇ ನೇರ ಉತ್ತರ ನೀಡದಿದ್ದರೂ, ನಾಚಿಕೆಯಿಂದ ನಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ನಡೆ “ಮೌನಂ ಸಮ್ಮತಿ ಲಕ್ಷಣಂ” ಎಂಬಂತೆ ಇದೆಯೇ ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ.

ಕೆಲ ಸಮಯದಿಂದ ರಶ್ಮಿಕಾ ಮತ್ತು ವಿಜಯ್ ಒಂದೇ ಸ್ಥಳದಲ್ಲಿ ರಜೆ ಕಳೆಯುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದವು. ಅಷ್ಟೇ ಅಲ್ಲದೆ, ಇಬ್ಬರೂ ಪರಸ್ಪರರ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವುದು ಕೂಡ ಈ ವದಂತಿಗಳಿಗೆ ಬಲ ತುಂಬಿದೆ. ಇಂದು ಏರ್‌ಪೋರ್ಟ್‌ನಲ್ಲಿ ಮದುವೆಯ ಪ್ರಶ್ನೆ ಕೇಳಿದಾಗ ಅವರು ನೀಡಿದ ರಿಯಾಕ್ಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳಂತೂ “ಗೀತಾ ಗೋವಿಂದಂ” ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button