ಸಿನಿಮಾಸುದ್ದಿ

ಅಮ್ಮನ ಕನಸಿನಂತೆ ‘ಡಾಕ್ಟರ್’ ಪದವಿ ಪಡೆದ ಲಕ್ಕಿ ಬ್ಯೂಟಿ ಶ್ರೀಲೀಲಾ!

ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ಟಾಲಿವುಡ್ ಮತ್ತು ಬಾಲಿವುಡ್ ಮಟ್ಟಕ್ಕೆ ಬೆಳೆದಿರುವ ನಟಿ ಶ್ರೀಲೀಲಾ ಅಧಿಕೃತವಾಗಿ ‘ಡಾಕ್ಟರಮ್ಮ’ ಆಗಿದ್ದಾರೆ. ಬೆಳ್ಳಿತೆರೆಯ ಮೇಲೆ ತಮ್ಮ ಅದ್ಭುತ ನೃತ್ಯ ಮತ್ತು ಎನರ್ಜಿ ಮೂಲಕ ಸಖತ್ ಕಿಕ್ ಕೊಡುತ್ತಿದ್ದ ಈ ಚೆಲುವೆ, ಇದೀಗ ತಮ್ಮ ಬಹುದಿನದ ಕನಸಾಗಿದ್ದ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಎಷ್ಟೇ ಸಿನಿಮಾಗಳು ಕೈಯಲ್ಲಿದ್ದರೂ, ಶೂಟಿಂಗ್ ಬ್ಯುಸಿ ನಡುವೆಯೂ ಹಠ ಬಿಡದ ಶ್ರೀಲೀಲಾ ಮೆಡಿಸಿನ್ ಓದನ್ನು ಪೂರೈಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಡಾನ್ಸಿಂಗ್ ಕ್ವೀನ್ ಈಗ ಡಾಕ್ಟರಮ್ಮ!
ಶ್ರೀಲೀಲಾ ಅವರಿಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಬಾಲ್ಯದಿಂದಲೇ ಅಪಾರ ಆಸಕ್ತಿ ಇತ್ತು. ಇದಕ್ಕೆ ಮುಖ್ಯ ಕಾರಣ ಅವರ ತಾಯಿ. ಶ್ರೀಲೀಲಾ ಅವರ ತಾಯಿ ಕೂಡ ವೈದ್ಯರಾಗಿದ್ದು, ಮಗಳು ಕೂಡ ಅದೇ ಹಾದಿಯಲ್ಲಿ ಸಾಗಬೇಕೆಂದು ಆಶಿಸಿದ್ದರು. ಸುತ್ತಮುತ್ತಲೂ ವೈದ್ಯಕೀಯ ವಾತಾವರಣದಲ್ಲೇ ಬೆಳೆದಿದ್ದ ಶ್ರೀಲೀಲಾಗೆ ಪ್ಯಾಶನ್ ಆಗಿ ನಟನೆ ಇದ್ದರೆ, ಗೋಲ್ ಆಗಿ ವೈದ್ಯಕೀಯ ಶಿಕ್ಷಣವಿತ್ತು. ಇದೀಗ ಬೆಂಗಳೂರಿನಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸುವ ಮೂಲಕ ಅಮ್ಮನ ಆಸೆಯಂತೆ ವೈದ್ಯಕೀಯ ಪದವಿ ಪಡೆದ ಸಂಭ್ರಮದಲ್ಲಿದ್ದಾರೆ.

ವಿಶೇಷವೆಂದರೆ ಶ್ರೀಲೀಲಾ ಕೇವಲ ನಟಿಯಾಗಿ ಮಾತ್ರವಲ್ಲದೆ ಭರತನಾಟ್ಯ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2021ರಲ್ಲಿ ತೆಲುಗಿನ ‘ಪೆಲ್ಲಿ ಸಂದಡ್’ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಂತರ ಅಲ್ಲಿ ಅವರಿಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಸಾಲು ಸಾಲು ಸಿನಿಮಾಗಳು, ದೊಡ್ಡ ದೊಡ್ಡ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಬ್ಯುಸಿ ಇದ್ದರೂ ಅವರು ಶಿಕ್ಷಣವನ್ನು ಮಾತ್ರ ಎಂದೂ ನಿರ್ಲಕ್ಷಿಸಲಿಲ್ಲ. ತೆರೆಯ ಮೇಲೆ ಹಾವಿನಂತೆ ಸೊಂಟ ಬಳುಕಿಸಿ ಡಾನ್ಸ್ ಮಾಡುವ ಶ್ರೀಲೀಲಾ, ಈಗ ನಿಜ ಜೀವನದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್ ಆಗಿ ಮಿಂಚಲು ಸಜ್ಜಾಗಿದ್ದಾರೆ.

Comments (0)

Your email address will not be published. Required fields are marked *

Back to top button