
ಬೀದರ್ : ಬೀದರ್ ಜಿಲ್ಲೆಯ ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಯುದ್ಧದ ಪರಿಸ್ಥಿತಿ ಈಗ ದೊಡ್ಡ ಹೊಡೆತ ನೀಡಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸಂಘರ್ಷದಿಂದಾಗಿ ಗಡಿ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರ ಬದುಕು ಅಕ್ಷರಶಃ ಬೀದಿಗೆ ಬಂದಿದೆ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಕಲ್ಲಂಗಡಿಗೆ 12 ರಿಂದ 15 ರೂಪಾಯಿ ಬೆಲೆ ಇರುತ್ತಿತ್ತು. ಆದರೆ ಪ್ರಸ್ತುತ ರಫ್ತು ಸ್ಥಗಿತಗೊಂಡಿರುವುದರಿಂದ ಬೆಲೆ ಕೇವಲ 2 ರೂಪಾಯಿಗೆ ಕುಸಿದಿದೆ. ಇಷ್ಟು ಕಡಿಮೆ ದರಕ್ಕೆ ನೀಡುತ್ತೇವೆ ಎಂದರೂ ವರ್ತಕರು ಖರೀದಿಗೆ ಮುಂದೆ ಬರುತ್ತಿಲ್ಲ ಎಂಬುದು ರೈತರ ಅಳಲು.
ಬೀದರ್ ತಾಲೂಕಿನ ರೈತ ವೈಜನಾಥ್ ಸಿದ್ದಾ ಅವರು ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಬೆಳೆ ಕಟಾವಿಗೆ ಬಂದ ಸಮಯದಲ್ಲೇ ಯುದ್ಧ ಆರಂಭವಾಗಿದ್ದರಿಂದ, ರಫ್ತು ಮಾರ್ಗಗಳು ಮುಚ್ಚಿ ಹೋಗಿವೆ. ಪರಿಣಾಮವಾಗಿ, ಅಪಾರ ಶ್ರಮ ಮತ್ತು ಹಣ ಹಾಕಿ ಬೆಳೆದ ಹಣ್ಣುಗಳು ಈಗ ಜಮೀನಿನಲ್ಲೇ ಕೊಳೆತು ಹೋಗುತ್ತಿವೆ.




