ದೇಶ/ವಿದೇಶ

ದೆಹಲಿ : ಜೋಶಿಯನ್ನು ಭೇಟಿ ಮಾಡಿದ ಆಂಧ್ರ ಪ್ರದೇಶ ಸಿಎಂ..!

ದೆಹಲಿ : ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯವರನ್ನು ಭೇಟಿ ಮಾಡಿದ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.ನವದೆಹಲಿಯಲ್ಲಿರುವ ಜೋಶಿ ನಿವಾಸದಲ್ಲಿ ವಿವಿಧ ಯೋಜನೆಗಳ ಕುರಿತಾಗಿ ಚರ್ಚೆ ಮಾಡಿದ ದೋಸ್ತಿ ನಾಯಕರು.

ಭಾರತದ ನವೀಕರಿಸಬಹುದಾದ ಇಂಧನ,ಪ್ರಧಾನಮಂತ್ರಿ ಕುಸುಮ್ ಹಾಗೂ ಪಿಎಂ ಸೂರ್ಯಘರ್ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ.ಹಸಿರು ಶಕ್ತಿ ಕಾರಿಡಾರ್ ಹಾಗೂ ಸೌರ ಉದ್ಯಾನ ಸ್ಥಾಪನೆ ಬಗ್ಗೆ ಮಾತುಕತೆ ನಡೆಸಿದ್ದಾರೆ.ರೂಫ್‌ಟಾಪ್ ಸೋಲಾರ್ ಜಾರಿಗೆ ಸಂಬಂಧಿಸಿದ ಅಡಚಣೆಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಜೋಶಿ ಜೊತೆ ಚರ್ಚೆ ಮಾಡಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು.

ಈ ವೇಳೆ ನಾಗರಿಕ ವಿಮಾನಯಾನ ಖಾತೆಯ ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ,ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆಯ ರಾಜ್ಯ ಸಚಿವ ಪೆಮ್ಮಾಸಾನಿ ಚಂದ್ರಶೇಖರ್ ಭಾಗವಹಿಸಿದ್ದರು.

Comments (0)

Your email address will not be published. Required fields are marked *

Back to top button