bengaluruರಾಜಕೀಯಸುದ್ದಿ

ಪೀಣ್ಯ ಕೈಗಾರಿಕಾ ವಲಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ..!

ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಷ್ಟೇ ಅಲ್ಲ, ನಗರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಇದು ದೇಶದ ರಕ್ಷಣಾ ಕ್ಷೇತ್ರ ಮತ್ತು ರೈಲ್ವೆ ಇಲಾಖೆ ಮೇಲೂ ಪರಿಣಾಮ ಬೀರುತ್ತಿದೆ. ರಕ್ಷಣಾ ಇಲಾಖೆಯ ವಾಹನಗಳ ತಯಾರಿಕೆಗೆ ಹಾಗೂ ರೈಲ್ವೆ ಇಲಾಖೆಗೆ ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುತ್ತಿದ್ದ ಪೀಣ್ಯಾದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿಯನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿರುವ ಪೀಣ್ಯ ಕೈಗಾರಿಕಾ ವಲಯದ ಸಣ್ಣ ಕೈಗಾರಿಕೆಗಳು ಈಗ ಗಂಭೀರ ಸಂಕಷ್ಟ ಎದುರಿಸುತ್ತಿವೆ. ವಿಶೇಷವಾಗಿ ಟೂಲ್ಸ್, ಪ್ರೊಫೈಲ್ ಮತ್ತು ಆಟೋಮೊಬೈಲ್ ಬಿಡಿಭಾಗ ತಯಾರಿಕಾ ಕಂಪನಿಗಳು ಕಚ್ಚಾ ವಸ್ತು ಹಾಗೂ ಇಂಧನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

ಪೀಣ್ಯಾದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿದೆ. ಈ ಸಂಸ್ಥೆ ಭಾರತೀಯ ರಕ್ಷಣಾ ವಲಯ ಮತ್ತು ರೈಲ್ವೆಗೆ ಅಗತ್ಯವಾದ ಬಿಡಿಭಾಗಗಳನ್ನು ಪೂರೈಸುತ್ತಿತ್ತು. ಜೊತೆಗೆ ವಿಪ್ರೋ ಸೇರಿದಂತೆ ಹಲವು ಕಂಪನಿಗಳಿಗೂ ಪೂರೈಕೆಗಳನ್ನು ಮಾಡುತ್ತಿತ್ತು.

Comments (0)

Your email address will not be published. Required fields are marked *

Back to top button