Wednesday, August 20, 2025
18.9 C
Bengaluru
Google search engine
LIVE
ಮನೆಜ್ಯೋತಿಷ್ಯ4 ರಾಶಿಗೆ ಮಾತ್ರ ರಾಜವೈಭೋಗ..! ಅದೃಷ್ಟ ಅಂದ್ರೆ ಇವರದ್ದು ಮಾತ್ರ

4 ರಾಶಿಗೆ ಮಾತ್ರ ರಾಜವೈಭೋಗ..! ಅದೃಷ್ಟ ಅಂದ್ರೆ ಇವರದ್ದು ಮಾತ್ರ

ಪ್ರತಿ ದಿನ ನಾವು ನಿಮಗೆ ರಾಶಿಗಳು ಹಾಗೇ ಅವುಗಳ ಫಲದ ಬಗ್ಗೆ ಹೇಳ್ತಿರ್ತೀವಿ.. ಇವತ್ತು ನಾವು ನಿಮಗೆ 4 ಪ್ರಮುಖ ರಾಶಿಯ ಬಗ್ಗೆ ಮಾಹಿತಿ ಕೊಡ್ತಿದ್ದೀವಿ.. ಈ ನಾಲ್ಕು ರಾಶಿಗಳವ್ರು ರಾಜರಂತೆ ಬದುಕ್ತಾರೆ.. ರಾಜವೈಭೋಗ ಅಂದ್ರೆ ಈ 4 ರಾಶಿಗೆ ಮಾತ್ರ ಇರೋದಂತೆ.. ಆ ರಾಶಿಗಳು ಯಾವ್ದು ಅಂತ ಹೇಳ್ತೀವಿ..

ವೃಷಭ, ವೃಶ್ಚಿಕ, ಧನಸ್ಸು ಮತ್ತು ಸಿಂಹ ರಾಶಿಯವ್ರದ್ದು ಅದೃಷ್ಟ ಅಂದ್ರೆ ಅದೃಷ್ಟವಂತೆ.. ರಾಜವೈಭೋಗ ಈ ನಾಲ್ಕು ರಾಶಿಯವ್ರನ್ನ ಅರಸಿಕೊಂಡು ಬರುತ್ತಂತೆ… ಒಂದೊಂದಾಗಿ ಯಾವ್ಯಾವ ರಾಶಿಗೆ ಏನೇನು ಲಾಭವಿದೆ ಅನ್ನೋದನ್ನ ವಿವರಿಸ್ತೀವಿ..

ವೃಷಭ ರಾಶಿಯವರು ಭೌತಿಕ ಗುಣಮಟ್ಟ ಮತ್ತು ಇಂದ್ರಿಯ ಆನಂದದ ಮೇಲೆ ಗಮನ ಕೇಂದ್ರೀಕರಿಸಿದ ರಾಜ ವೈಭೋಗಕ್ಕೆ ಹೆಚ್ಚು ಆದ್ಯತೆ ಕೊಡ್ತಾರಂತೆ.. ಸೌಂದರ್ಯ, ಸೌಕರ್ಯ ಕಲ್ಪಿಸೋ ಗ್ರಹವಾದ ಶುಕ್ರನಿಂದ ಈ ವೃಷಭ ರಾಶಿಯವರು ಲಾಭ ಪಡೆಯುತ್ತಾರೆ.. ಶುಕ್ರನಿಂದಾಗಿ ವೃಷಭ ರಾಶಿಯವರು ಐಷಾರಾಮಿ ಜೀವನವನ್ನ ಇಷ್ಟ ಪಡ್ತಾರೆ.. ರಾಜ ಜೀವನ ನಡೆಸೋ ಸಲುವಾಗಿ ವೃಷಭ ರಾಶಿಯವರು ತಮ್ಮ ಸುತ್ತಲಿನ ಎಲ್ಲದರಲ್ಲೂ ಕೂಡ ಐಷಾರಾಗಿ ಗುಣಮಟ್ಟದ ವಸ್ತುಗಳು ಇರ್ಬೇಕು ಅಂತ ಬಯಸ್ತಾರೆ.. ಹಾಗೇ ಬೇರೆ ರಾಶಿಯವ್ರು ತಮ್ಮ ಅನುಕೂಲಕ್ಕಾಗಿ ರಾಜಿ ಮಾಡಿಕೊಳ್ಳಬಹುದು. ಆದ್​ರೆ ವೃಷಭ ರಾಶಿಯವ್ರು ಸೌಕರ್ಯದ ವಿಷಯದಲ್ಲಿ ರಾಜಿ ಆಗೋದೇ ಇಲ್ಲ..

ವೃಶ್ಚಿಕ ರಾಶಿಯವರು ಭಾವನಾತ್ಮಕ ಕೇಂದ್ರೀಕೃತವಾದ ರಾಜ ಜೀವನಕ್ಕೆ ಇಷ್ಟ ಪಡ್ತಾರೆ. ವೃಶ್ಚಿಕ ರಾಶಿಯವರು ಆಳವಾದ, ಜೀವನವನ್ನು ಬದಲಾಯಿಸುವ ಮತ್ತು ಆತ್ಮವನ್ನು ಕಲಕುವ ಅನುಭವಗಳ ಕಡೆಗೆ ನೈಸರ್ಗಿಕ ಒಲವನ್ನು ಹೊಂದಿರುತ್ತಾರೆ. ಐಶಾರಾಮಿ ಜೀವನಕ್ಕೆ ವೃಶ್ಚಿಕ ರಾಶಿಯವರು ಹೆಚ್ಚು ಇಷ್ಟ ಪಡ್ತಾರೆ. ಬೇರೆಯವ್ರು ಆಹ್ಲಾದಕರ ಸಂಬಂಧಗಳು ಅಥವಾ ಅನುಭವಗಳಿಂದ ತೃಪ್ತರಾಗಿರ್ತಾರೆ. ಅದೇ ರೀತಿ ವೃಶ್ಚಿಕ ರಾಶಿಯವರು ಮಾನವನ ಭಾವನೆಗಳ ಮೇಲೆ ಸಂಬಂಧ ಗಟ್ಟಿಕೊಳಿಸ್ಕೊಳ್ತಾರೆ.

ಧನು ರಾಶಿಯವರು ತಮ್ಮ ಮಿತಿಯಿಲ್ಲದ ಆಶಾವಾದ ಮತ್ತು ವಿಸ್ತಾರವಾದ ಅನುಭವಗಳಿಗಾಗಿ ರಾಜವೈಭೋಗ ನಡೆಸಲು ಇಷ್ಟ ಪಡ್ತಾರೆ. ಸಮೃದ್ಧಿ, ಬೆಳವಣಿಗೆಯ ಗ್ರಹವಾದ ಗುರುವಿನ ಆಳ್ವಿಕೆಯಿಂದ ಧನು ರಾಶಿಯವ್ರು ರಾಜವೈಭೋಗದ ಜೀವನ ಇಷ್ಟ ಪಡ್ತಾರೆ. ಅನೇಕ ಧನು ರಾಶಿಯವರು ದಿನನಿತ್ಯದ ಮತ್ತು ಪರಿಚಿತ ಸುತ್ತಮುತ್ತಲಿನ ಪ್ರದೇಶಗಳಿಂದ ಉಸಿರುಗಟ್ಟಿದಂತಾಗುತ್ತದೆ. ಬದಲಿಗೆ ಅವರ ದೃಷ್ಟಿಕೋನವನ್ನು ವಿಸ್ತರಿಸುವ ಮತ್ತು ಜೀವನದ ಅನಂತ ಸಾಧ್ಯತೆಗಳನ್ನು ನೆನಪಿಸುವ ಪ್ರಯಾಣದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಸಿಂಹ ರಾಶಿಯ ಜನರು ತಮ್ಮ ನೈಸರ್ಗಿಕ ರಾಜಮನೆತನದ ನಡವಳಿಕೆಯಿಂದ ರಾಜನ ರೀತಿಯಲ್ಲಿ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯು ತಾವು ಭವ್ಯವಾಗಿ ಬದುಕಲು ಹುಟ್ಟಿದ್ದೇವೆ ಎಂಬ ಭಾವನೆ ಹೊಂದಿರ್ತಾರೆ. ಸಿಂಹ ರಾಶಿಯವರ ವೈಭವ ಜೀವನ ದೈನಂದಿನ ಅಭ್ಯಾಸವಾಗಿರುತ್ತೆ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments