ರಾಜಕೀಯರಾಜ್ಯಸುದ್ದಿ

ಪ್ರದೀಪ್​​​​ ಈಶ್ವರ್​​​ Vs ಪ್ರತಾಪ್​​​​ ಸಿಂಹ ನಡುವೆ ತಾರಕಕ್ಕೆ ಏರಿದ ವಾಕ್ಸಮರ

ಮೈಸೂರು: ಕಾಂಗ್ರೆಸ್​​ ಶಾಸಕ ಪ್ರದೀಪ್​​ ಈಶ್ವರ್​​ ವಿರುದ್ಧ ಮಾಜಿ ಸಂಸದ ಪ್ರತಾಪ್​​ ಸಿಂಹ ನಡುವೆ ವಾಕ್​ ಸಮರ ಜೋರಾಗಿದೆ..

ಪ್ರದೀಪ್​ ಈಶ್ವರ್​​ ವಿರುದ್ಧ ಪ್ರತಾಪ್​ ಸಿಂಹ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಅವರು, ತಮ್ಮ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ ಎಂದು ವಾಗ್ದಾಳಿ ನಡೆಸಿದರು. ನನ್ನ ತಾಯಿ ಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಿಂದನಾತ್ಮಕವಾಗಿ ಮಾತನಾಡಿದ್ದೀಯ.

ನಿನಗೆ ವಾರ್ನಿಂಗ್ ಕೊಟ್ಟು ಹೇಳುತ್ತಿದ್ದೇನೆ. ಮುಳ್ಳು ಹಂದಿ ಮುಖ ಇರುವ ಕರ್ನಾಟಕದ ಏಕೈಕ ಕಾಮಿಡಿ ಪೀಸು ನಿಮ್ಮಪನಿಗೆ ಮಾತ್ರ ಹುಟ್ಟಿರುವುದು. ಇನ್ಯಾರು ವಾರಸದಾರರು ಅದಕ್ಕೆ ಬರುವುದಿಲ್ಲ. ಆದರೆ ನಮ್ಮಪ್ಪ ಏನಾದರೂ ಅವರ ಪ್ರಾಯದ ಕಾಲದಲ್ಲಿ ಚಿಕ್ಕಬಳ್ಳಾಪುರದ ಕಡೆ ಹೋಗಿದ್ದರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ.. ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ಪ್ರದೀಪ್‌ ಈಶ್ವರ್ ನ ಭಾಷೆಯಲ್ಲಿ ಉತ್ತರ ನೀಡುತ್ತಿರುವುದಕ್ಕೆ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇತ್ತ ಚಿಕ್ಕಬಳ್ಳಾಪುರದಲ್ಲಿ ಪ್ರತಾಪ್​ ಸಿಂಹಗೆ ಶಾಸಕ ಪ್ರದೀಪ್​ ಈಶ್ವರ್​ ತಿರುಗೇಟು ನೀಡಿದ್ದಾರೆ. ಎಷ್ಟು ಜನ ಗೌಡರ ಮಕ್ಕಳಿಗೆ ನೀನು ನೆರವಾಗಿದ್ದೀಯಾ? ನನ್ನ ಕ್ಷೇತ್ರದಲ್ಲಿ ನಾನು 2,500 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ. ನಾನು ಕತ್ತಲಲ್ಲಿ ಕಾಣಲ್ವಂತೆ, ಅಯೋಗ್ಯ, ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕುತ್ತಾನೋ ಗೊತ್ತಿಲ್ಲ. ಪ್ರತಾಪ ನಾನು ಹಾಗಲ್ಲ. ಆತನಿಗೆ 50-50 ಬಿಸ್ಕತ್ ಫೆವರೇಟ್​ ಎಂದು ಪ್ರದೀಪ್​ ಈಶ್ವರ್​ ವ್ಯಂಗ್ಯವಾಡಿದ್ದಾರೆ.

Comments (0)

Your email address will not be published. Required fields are marked *

Back to top button