ಕ್ರೈಂ ಸ್ಟೋರಿರಾಜ್ಯಸುದ್ದಿಹಣಕಾಸು

ಸ್ನೇಹಿತನ ಜೊತೆ ಶೇರ್ ಮಾಡಿದ ಪಾಸ್‌ವರ್ಡ್‌ ಭಯಂಕರ ಪಾಠ!

ಬೆಂಗಳೂರು: ನಗರದ ಕೋರಮಂಗಲದಲ್ಲಿ ನಡೆದ ಘಟನೆ ಸ್ನೇಹದ ಮೇಲೆ ಇಟ್ಟ ನಂಬಿಕೆಗೆ ದೊಡ್ಡ ಹೊಡೆತ ನೀಡಿದೆ. ಚಿಂತನ್ ಆರೋರಾ ತನ್ನ ಸ್ನೇಹಿತ ನವೀನ್ ವೆಮುಲಗೆ ಪಾಸ್‌ವರ್ಡ್ ನೀಡಿದ್ದರಿಂದಲೇ ಸುಮಾರು 4.5 ಲಕ್ಷ ರೂ. ಮೌಲ್ಯದ ಆನ್‌ಲೈನ್ ಖರೀದಿ ನಡೆದಿದೆ.
ಒಟ್ಟಿಗೆ ವಾಸಿಸುತ್ತಿದ್ದ ಈ ಇಬ್ಬರು ಆತ್ಮೀಯರಾಗಿದ್ದ ಕಾರಣ, ಮೊಬೈಲ್ ಮಾಹಿತಿ ಹಂಚಿಕೊಳ್ಳುವುದು ಸಾಮಾನ್ಯವಾಗಿತ್ತು. ಒಂದು ರಾತ್ರಿ ಪಾರ್ಟಿ ನಂತರ, ಚಿಂತನ್ ಮಲಗುವ ಮುನ್ನ ತನ್ನ ಫೋನ್ ಪಾಸ್‌ವರ್ಡ್ ಅನ್ನು ನವೀನ್‌ಗೆ ತಿಳಿಸಿದ್ದ.
ಮರುದಿನ ಎದ್ದಾಗ ನವೀನ್ ಕಾಣೆಯಾಗಿದ್ದ. ಫೋನ್ ಪರಿಶೀಲಿಸಿದಾಗ 4,45,870 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿರುವುದು ತಿಳಿದುಬಂದಿದೆ. ಉಳಿದ ಹಣವನ್ನೂ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಆತ ಪರಾರಿಯಾಗಿದ್ದಾನೆ. ಕೊನೆಗೆ, ಮೋಸಕ್ಕೆ ಒಳಗಾದ ಚಿಂತನ್ ಆರೋರಾ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments (0)

Your email address will not be published. Required fields are marked *

Back to top button