ಮೆಸೇಜಿಂಗ್ ಅಪ್ಲಿಕೇಷನ್ ಅಂತ ಕೂಡ್ಲೆ ಮೊದಲಿಗೆ ಬರೋದು ವಾಟ್ಸಾಪ್.. ಆಮೇಲೆ ಫೇಸ್ಬುಕ್ ಮೆಸೆಂಜರ್ ಹಾಗೇ ಟೆಲಿಗ್ರಾಂ… ಇದರ ಜೊತೆ ಸಾಕಷ್ಟು ಮೆಸೇಜಿಂಗ್ ಅಪ್ಲಿಕೇಷನ್ಸ್ ಇದ್ದಾವೆ.. ಅವೆಲ್ಲಕ್ಕೂ ಇಂಟರ್ನೆಟ್ ಬೇಕೇ ಬೇಕು.. ಇಂಟರ್ ನೆಟ್ ಇಲ್ಲದೆ ಮೆಸೇಜ್ ಕಳಿಸೋಕೆ ಆಗಲ್ಲ.. ಆದ್ರೆ ಇನ್ಮುಂದೆ ಹೊಸ ಅಪ್ಲಿಕೇಷನ್ ಒಂದು ಬಂದಿದೆ. ಇಂಟರ್ ನೆಟ್ ಇಲ್ಲದೆಯೇ ವಾಟ್ಸಾಪ್ ರೀತಿ ಮೆಸೇಜ್ಗಳನ್ನ ಕಳಿಸಬಹುದು.. ಟ್ವಿಟರ್‌ನ ಮಾಜಿ CEO ಜ್ಯಾಕ್ ಡಾರ್ಸಿ ಅವರು ಇಂಟರ್ನೆಟ್ ಅಗತ್ಯವಿಲ್ಲದ ಅಪ್ಲಿಕೇಶನ್ ಒಂದನ್ನ ಹೊರತಂದಿದ್ದಾರೆ.. ಇದು ಬ್ಲೂಟೂತ್ ಮೂಲಕ ಕೆಲಸ ಮಾಡುತ್ತೆ.. ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುವ ಮೂಲಕ ಚಾಟ್ ಮಾಡಬಹುದಾದ ಬಿಟ್‌ಚಾಟ್ ಎಂಬ ಅಪ್ಲಿಕೇಶನ್ ಶೀಘ್ರದಲ್ಲೇ ಬರ್ತಿದೆ.. ಇದಕ್ಕೆ ಇಂಟರ್ನೆಟ್, ಸರ್ವರ್ ಅಥವಾ ಮೊಬೈಲ್ ಸಂಖ್ಯೆ ಅಥವಾ ಯಾವುದೇ ಇಮೇಲ್ ಐಡಿ ಕೂಡ ಬೇಕಾಗಿಲ್ಲ..
ಬಿಟ್ ಚಾಟ್ ಅನ್ನೋದು ಫುಲ್ ಡಿಫರೆಂಟ್.. ಇದು ಬ್ಲೂಟೂತ್ ಮೂಲಕ ಒಂದು ಮೊಬೈಲ್ನಿಂದ ಇನ್ನೊಂದಕ್ಕೆ ನೇರವಾಗಿ ಕನೆಕ್ಟ್ ಆಗುತ್ತೆ.. ಆದ್ರೆ ಇದಕ್ಕೆ ಲಿಮಿಟ್ ಕೂಡ ಇದೆ..ದೂರದಲ್ಲಿ ಇರೋರ ಜೊತೆ ಇದ್ರಿಂದ ಮಾತಾಡೋಕೆ ಆಗಲ್ಲ.. ಅಂದ್ರೆ ಈ ಬಿಟ್ ಚಾಟ್ ಮಿತಿ ಕೇವಲ 100 ಮೀಟರ್ ಮಾತ್ರ.. 100 ಮೀಟರ್ ದೂರದಲ್ಲಿ ಇರೋರ ಜೊತೆಗಷ್ಟೇ ಚಾಟ್ ಮಾಡಬಹುದು.. ಅಂದ್ರೆ ಬ್ಲೂಟೂತ್ ಎಷ್ಟು ದೂರದವರೆಗೂ ಕನೆಕ್ಟ್ ಆಗುತ್ತೋ ಅಷ್ಟು ದೂರುದವರೆಗೆ ಇರುವವರ ಜೊತೆ ಮಾತ್ರ ಚಾಟ್ ಮಾಡಬಹುದು. ಇದು ಹೆಚ್ಚಾಗಿ ಒಂದೇ ಆಫೀಸ್ನಲ್ಲಿ ಅಥವಾ ಅತಿ ಜನದಟ್ಟಣೆ ಇರೋ ಪ್ರದೇಶದಲ್ಲಿ ಒಂದೇ ಕಡೆ ಇರೋ ಸ್ನೇಹಿತರ ಜೊತೆ ಚಾಟ್ ಮಾಡಲು ಇದು ಬಳಸ್ಬೋದು.. ಜನದಟ್ಟಣೆ ಇದ್ದಲ್ಲಿ ನೆಟ್ವರ್ಕ್ ಕೂಡ ಸಿಗಲ್ಲ.. ಇಂಥ ಕಡೆ ಇದು ಯೂಸ್ ಆಗುತ್ತೆ. ಹಾಗೇ ಆಫೀಸ್ನಲ್ಲಿ ಅಥವ ಒಂದೇ ಬಿಲ್ಡಿಂಗ್ನಲ್ಲಿ ಬೇರೆ ಬೇರೆ ಕಡೆ ಇರುವವರ ಜೊತೆ ಈ ಬಿಟ್ ಚಾಟ್ ಅಪ್ಲಿಕೇಷನ್ ಬಳಸಿ ಚಾಟ್ ಮಾಡ್ಬೋದು, ಇದಕ್ಕೆ ನೀವು ಯಾವ್ದೇ ಇಂಟರ್ನೆಟ್ ಬೇಕಾಗಿಲ್ಲ..
ಬಿಟ್ ಚಾಟ್ ಸಂಸ್ಥಾಪಕರಾದ ಡಾರ್ಸಿ ಅವ್ರು ಹೇಳೋ ಪ್ರಕಾರ ಈ ಅಪ್ಲಿಕೇಶನ್ ಹೆಚ್ಚು ದೂರದಲ್ಲಿ ಕೂಡ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. 300 ಮೀಟರ್ ವರೆಗೂ ತಲುಪುತ್ತೆ ಅಂತ ಹೇಳಿದ್ದಾರೆ..
ವಿಷಯ ಏನಂದ್ರೆ ಈ ಒಂದು ಆವಿಷ್ಕಾರ ಮುಂದಿನ ದಿನದಲ್ಲಿ ದೂರ ದೂರ ಇರೋರನ್ನ ಕೂಡ ಬ್ಲೂಟೂತ್ ಮೂಲಕವೇ ಇಂಟರ್ನೆಟ್ ಇಲ್ಲದೆ ಸಂಪರ್ಕಿಸೋ ದಿನಗಳು ಬರುತ್ತೆ ಅನ್ನೋದರ ಮುನ್ಸೂಚನೆ ಆಗಿದೆ.
ಬಿಟ್‌ಚಾಟ್ ಸಂಪೂರ್ಣವಾಗಿ ಪೀರ್-ಟು-ಪೀರ್ ಅಂದರೆ ಸಾಧನದಿಂದ ಸಾಧನಕ್ಕೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ, ಯಾವುದೇ ಖಾತೆಯನ್ನು ರಚಿಸಬೇಕಾಗಿಲ್ಲ, ಅಥವಾ ಯಾವುದೇ ಗುರುತಿನ ಸಂಖ್ಯೆ, ಇಮೇಲ್ ನೀಡಬೇಕಿಲ್ಲ. ಈ ಅಪ್ಲಿಕೇಶನ್‌ನ ಬೀಟಾ ಆವೃತ್ತಿ ಈಗ ಟೆಸ್ಟ್‌ಫ್ಲೈಟ್‌ನಲ್ಲಿ ಲಭ್ಯವಿದೆ ಎಂದು ಡಾರ್ಸೆ ಹೇಳಿದ್ದಾರೆ.