ತುಮಕೂರು-ಬೆಂಗಳೂರು ನಡುವೆ ನಿತ್ಯ ಓಡಾಡುವ ಮಂದಿಗೆ ಗುಡ್ ನ್ಯೂಸ್. ಇಷ್ಟು ದಿನ ಬೆಂಗಳೂರಿಗಷ್ಟೇ ಸೀಮಿತಾವಾಗಿದ್ದ ಮೆಟ್ರೋ, ತುಮಕೂರು ಜಿಲ್ಲೆಗೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಬಿಎಂಆರ್ಸಿಎಲ್ ಕಾರ್ಯಸಾಧ್ಯತಾ ಪರೀಕ್ಷಾ ವರದಿ ಸಲ್ಲಿಸಿದೆ.
ರಾಜ್ಯ ಸರ್ಕಾರ ಅನುಮತಿ ನೀಡಿದ್ರೆ, ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರಿನ ಮಾದಾವರದಿಂದ, ತುಮಕೂರಿನ ಶಿರಾ ಗೇಟ್ ವರೆಗೆ ಮೆಟ್ರೋ ವಿಸ್ತರಣೆ ಕಾಮಗಾರಿ ಶುರುವಾಗಲಿದೆ.
56 ಕಿಲೋ ಮೀಟರ್ ದೂರ ಮತ್ತು 25 ಎತ್ತರಿಸಿದ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಜ್ಜಾಗಿದೆ.
ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆ ಆದ್ರೆ ನೆಲಮಂಗಲ ಬಳಿ ಆಗುತ್ತಿದ್ದ ಸಂಚಾರ ದಟ್ಟಣೆಗೆ ಬ್ರೇಕ್ ಬೀಳಲಿದೆ.
ಹಾಸನ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ದಾವಣಗೆರೆ, ಶಿವಮೊಗ್ಗ ಹೀಗೆ ಹಲವು ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೆಲಮಂಗಲದ ಮೂಲಕವೇ ಬರಬೇಕಿತ್ತು.
ತುಮಕೂರಿಗೆ ಮೆಟ್ರೋ ವಿಸ್ತರಣೆಯಾದ್ರೆ, ತುಮಕೂರು ಅಥವಾ ನೆಲಮಂಗಲದಿಂದ ಯಶವಂತಪುರ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿ ಹಲವು ಪ್ರಮುಖ ಏರಿಯಾಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ.
ಇದರಿಂದಾಗಿ ನೆಲಮಂಗಲ, ಪೀಣ್ಯ ದಾಸರಹಳ್ಳಿ, ಗೊರಗುಂಟೆ ಪಾಳ್ಯ, ಯಶವಂತಪುರ, ರಾಜಾಜಿನಗರದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಕ್ಕಿದಂತೆ ಆಗುತ್ತದೆ.
ಜೊತೆಗೆ ಮೆಟ್ರೋ ಆದಾಯವೂ ಏರಿಕೆಯಾಗಲಿದೆ.