Wednesday, February 11, 2026
26.3 C
Bengaluru
Google search engine
LIVE
ಮನೆ#Exclusive NewsTop Newsಲಂಚ ಕೇಳಿದ ಅಧಿಕಾರಿಗಳಿಗೆ 'ಮೂಲಂಗಿ' ಗಿಫ್ಟ್! ಭ್ರಷ್ಟರಿಗೆ ರೈತನ ವಿಭಿನ್ನ ಶಾಕ್'

ಲಂಚ ಕೇಳಿದ ಅಧಿಕಾರಿಗಳಿಗೆ ‘ಮೂಲಂಗಿ’ ಗಿಫ್ಟ್! ಭ್ರಷ್ಟರಿಗೆ ರೈತನ ವಿಭಿನ್ನ ಶಾಕ್’

ತುಮಕೂರು: ಭ್ರಷ್ಟ ವ್ಯವಸ್ಥೆಯ ವಿರುದ್ಧ ರೈತರೊಬ್ಬರು ವಿಶಿಷ್ಟವಾಗಿ ಪ್ರತಿಭಟಿಸಿರುವ ಘಟನೆ ಈಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಲೋಕಾಯುಕ್ತರ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿಗಳ ನಡೆಗೆ ಆಕ್ರೋಶಗೊಂಡ ರೈತ ಪ್ರಸನ್ನಕುಮಾರ್, ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾಗುವ ಮೂಲಕ ಅಧಿಕಾರಿಗಳ ಕರ್ತವ್ಯ ಲೋಪವನ್ನು ಬಯಲಿಗೆಳೆದಿದ್ದಾರೆ.

ಲಂಚ ಕೊಡಲು ಹಣವಿಲ್ಲ, ಮೂಲಂಗಿ ತಗೊಳ್ಳಿ: ಮಧುಗಿರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿಯ ಈ ರೈತ, ತನ್ನ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಕಳೆದ ಎರಡು ವರ್ಷಗಳಿಂದ ತಾಲೂಕು ಕಚೇರಿಗೆ ಅಲೆಯುತ್ತಿದ್ದರು. ಅಧಿಕಾರಿಗಳು ಸ್ಪಂದಿಸದ ಕಾರಣ ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದರು. ಒಂದು ತಿಂಗಳೊಳಗೆ ರಸ್ತೆ ನಿರ್ಮಿಸಿಕೊಡುವಂತೆ ಲೋಕಾಯುಕ್ತರು ಸೂಚಿಸಿದ್ದರೂ, ಕಂದಾಯ ಅಧಿಕಾರಿಗಳು ಮಾತ್ರ ಸ್ಥಳ ಮಹಜರು ನಡೆಸಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರೈತ, ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು “ನನ್ನ ಹತ್ತಿರ ಕೊಡಲು ಹಣವಿಲ್ಲ, ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ, ಬನ್ನಿ ಬನ್ನಿ” ಎಂದು ಕೂಗುವ ಮೂಲಕ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ತಹಶೀಲ್ದಾರ್ ಸೂಚನೆ ನೀಡಿದ್ದರೂ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಬಾರದೆ ಸತಾಯಿಸುತ್ತಿರುವುದು ರೈತನ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ರೈತ, ವ್ಯವಸ್ಥೆಯ ವಿರುದ್ಧ ನಡೆಸಿದ ಈ ‘ಮೂಲಂಗಿ ಸತ್ಯಾಗ್ರಹ’ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments