ಜ್ಯೋತಿಷ್ಯ

ಈ ಬಣ್ಣದ ಹಾವು ಕಂಡ್ರೆ ಅದೃಷ್ಟ – ಲಕ್ಷ್ಮಿ ಕೃಪೆಗಾಗಿ ಈ ಹಾವು ಹುಡುಕಿ

ಹಾವು ಅಂದ್ರೆ ಎಲ್ರಿಗೂ ಭಯ.. ಆದ್ರೆ ಹಾವನ್ನು ಕಂಡರೆ ಭಾರಿ ಅದೃಷ್ಟ ಖುಲಾಯಿಸುತ್ತಂತೆ.. ಅಂತಾ ಹಾವು ಯಾವುದು ಅಂತ ಹೇಳ್ತೀವಿ ನೋಡಿ..

ಒಂದು ಬಗೆಯ ಬಣ್ಣದ ಹಾವು ಕಾಣಿಸಿಕೊಂಡ್ರೆ ಸಾಕು, ನಿಂತು ಹೋಗಿದ್ದ ಕೆಲಸ ಕೂಡ ಪೂರ್ಣಗೊಳ್ಳುತ್ತೆ. ನೆಲದಲ್ಲಿ ಹೂತುಹೋಗಿರುವ ಗುಪ್ತ ಸಂಪತ್ತು ಕಣ್ಣ ಮುಂದೆ ಬರುತ್ತೆ. ಈ ಹಾವು ಎಷ್ಟು ಲಕ್ಕಿ ಅಂದ್ರೆ ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ತಂದುಕೊಡುತ್ತಂತೆ.

ಭಾರತದಲ್ಲಿ ಕಂಡು ಬರುವ ನಾಲ್ಕು ಅತ್ಯಂತ ವಿಷಕಾರಿ ಜಾತಿ ಹಾವು ಮತ್ತು ವಿಷಕಾರಿಯಲ್ಲದ ಹಾವುಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅಪರೂಪದ ಬಿಳಿ ಹಾವು ಕಾಣಿಸಿಕೊಂಡಿದೆ. ನರ್ಮದಾ ನದಿ ಮತ್ತು ಸಾತ್ಪುರ ಬೆಟ್ಟಗಳ ಸುತ್ತಲೂ ಈ ಬಿಳಿ ಹಾವು ಹೆಚ್ಚಾಗಿ ಕಂಡು ಬರುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ, ಬಿಳಿ ಹಾವನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ದೇಶದಲ್ಲಿ ಹಲವು ರೀತಿಯ ಹಾವುಗಳಿವೆ. ಧಾರ್ಮಿಕ ಗ್ರಂಥಗಳಲ್ಲಿ 144 ವಿಧದ ಹಾವುಗಳ ಜಾತಿಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಯೊಂದು ಜಾತಿಗೂ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಬಿಳಿ ಹಾವು ಅತ್ಯುನ್ನತ ಮಹತ್ವವನ್ನು ಹೊಂದಿದೆ.

ಧಾರ್ಮಿಕ ಗ್ರಂಥಗಳಲ್ಲೂ ಬಿಳಿ ಹಾವಿನ ಉಲ್ಲೇಖವಿದೆ. ಬಿಳಿ ಬಣ್ಣದ ಹಾವುಗಳನ್ನು ನೋಡುವುದು ಶುಭ ಕಾಲದ ಸೂಚನೆ ಎಂದು ಜ್ಯೋತಿಷಿಗಳು ನಂಬುತ್ತಾರೆ. ಬಿಳಿ ಹಾವು ಕಾಣಿಸಿಕೊಂಡ ನಂತರ, ಜನರು ಸಂಪತ್ತನ್ನು ನೆಲದಲ್ಲಿ ಹೂತುವಷ್ಟು ಶ್ರೀಮಂತರಾಗ್ತಾರೆ ಎನ್ನುವ ಮಾತಿದೆ. ಹಣದ ಹೊಳೆಯೇ ಹರಿದು ಬರುತ್ತೆ ಎನ್ನಲಾಗ್ತಿದೆ. ಅದಕ್ಕಾಗಿಯೇ ಗ್ರಾಮೀಣ ಪ್ರದೇಶದ ಜನರು ಇದನ್ನು ದೈವಿಕ ಸಂಕೇತವೆಂದು ಪರಿಗಣಿಸುತ್ತಾರೆ.

ಬಿಳಿ ಹಾವು ಲಕ್ಷ್ಮಿಯ ಪ್ರತೀಕವಾಗಿದೆ. ನಿಮ್ಮೊಂದಿಗೆ ಹಾವು ನಡೆದುಕೊಂಡು ಹೋಗುವುದನ್ನು ಅಥವಾ ನಿಮ್ಮನ್ನು ಕಚ್ಚುವುದನ್ನು ಕನಸಿನಲ್ಲಿ ನೋಡಿದರೆ, ಅದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ, ನಿಮಗೆ ಅನಿರೀಕ್ಷಿತವಾಗಿ ಹಣ ಬರುತ್ತೆ ಎನ್ನುವ ನಂಬಿಕೆ ಇದೆ. ನೀವು ನಿಜವಾಗಿಯೂ ಬಿಳಿ ಹಾವನ್ನು ನೋಡಿದ್ರೆ, ನಿಮಗೆ ತಕ್ಷಣವೇ ಆರ್ಥಿಕ ಲಾಭ ದೊರೆಯುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.

ಬಿಳಿ ಹೆಬ್ಬಾವು ಬಹಳ ಅಪರೂಪದ್ದಾಗಿದ್ದು ಹಾವಿಗೆ ಬಿಳಿ ಬಣ್ಣ ಬರಲು ವಿಶೇಷ ಕಾರಣವೊಂದಿದೆ. ಅಂದಹಾಗೆ ಬಿಳಿ ಹೆಬ್ಬಾವು ಬೇರೆ ತಳಿಯ ಹಾವು ಏನಲ್ಲ ಹಾವುಗಳ ಚರ್ಮಕ್ಕೆ ಬಣ್ಣ ಕೊಡೋದನ್ನ ನಾವು ವರ್ಣ ದ್ರವ್ಯ ಗ್ರಂಥಿ ಎನ್ನುತ್ತೀವಿ.. ಇದರಲ್ಲಿ ಮೆಲಾಲಿನ್ ಹಾಗೂ ಪಿಗ್ಮೆಂಟ್ ಕೊರತೆ ಕಾಣಿಸಿಕೊಂಡಾಗ ಆ ಹಾವು ಬಿಳಿಯ ಬಣ್ಣಕ್ಕೆ ತಿರುಗಿರುತ್ತೆ.. ಹೀಗಾಗಿ ಇದನ್ನೇ ಬಿಳಿ ಹಾವು ಎನ್ನುತ್ತೇವೆ..

Comments (0)

Your email address will not be published. Required fields are marked *

Back to top button