
ನವದೆಹಲಿ: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ಯುದ್ಧದ ನಡುವೆ ಮತ್ತೆರಡು ಎಲ್‌ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಆಗಮಿಸುತ್ತಿವೆ. ಹೀಗಾಗಿ, ದೇಶದಲ್ಲಿ ಎಲ್‌ಪಿಜಿ ಬಿಕ್ಕಟ್ಟಿನ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. 92,612.59 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಎರಡು ಭಾರತೀಯ ಎಲ್‌ಪಿಜಿ ವಾಹಕಗಳಾದ ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಸಾಗಿವೆ.
ಜಗ್ ವಸಂತ್ ಹಡಗಿನಲ್ಲಿ 33 ಮತ್ತು ಪೈನ್ ಗ್ಯಾಸ್ ಹಡಗಿನಲ್ಲಿ 27 ಭಾರತೀಯ ನಾವಿಕರು ಇದ್ದಾರೆ. ಈ ಹಡಗುಗಳು ಮಾರ್ಚ್ 26 ಮತ್ತು 28ರ ನಡುವೆ ಭಾರತದ ಬಂದರುಗಳನ್ನು ತಲುಪುವ ಸಾಧ್ಯತೆಯಿದೆ.




